ಫೆ.19-20: ನೀರು ಸರಬರಾಜಿನಲ್ಲಿ ವ್ಯತ್ಯಯ
ಮಂಗಳೂರು, ಫೆ.18: ಮಂಗಳೂರು ಮಹಾನಗರ ಪಾಲಿಕೆ ನೀರು ಸರಬರಾಜು ವ್ಯವಸ್ಥೆಯ ತುಂಬೆ ಎಚ್‌ಎಲ್‌ಪಿಎಸ್-1 18ಎಂಜಿಡಿ ರೇಚಕ ಸ್ಥಾವರದಿಂದ ಬೆಂದೂರು, ಪಣಂಬೂರು ಕಡೆಗೆ ನೀರು ಸರಬರಾಜು ಮಾಡುವ 1000 ವ್ಯಾಸದ ಮುಖ್ಯ ಕೊಳವೆಯು ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಕಣ್ಣೂರು ಶೆಲ್ ಪೆಟ್ರೋಲ್ ಪಂಪ್ ಹತ್ತಿರ ಸೋರುವಿಕೆ ಉಂಟಾಗಿದ್ದು, ಫೆ.19 ಮತ್ತು 20ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಕಂಡುಬರಲಿದೆ.
ಕೊಳವೆ ದುರಸ್ತಿ ಕಾರ್ಯವು ಫೆ.19ರಂದು ಬೆಳಗ್ಗೆ 6ರಿಂದ ಸಂಜೆವರೆಗೆ ಹಾಗೂ ಫೆ.20ರಂದು ಬೆಳಗ್ಗೆ 6 ಗಂಟೆಯವರೆಗೆ ಸಂಜೆವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಸುರತ್ಕಲ್, ಪಣಂಬೂರು, ಕಾನಾ-ಬಾಳ, ಕೂಳೂರು, ಕಾವೂರು ಭಾಗಶಃ, ಬೆಂದೂರು ಭಾಗಶಃ, ಕಾರ್‌ಸ್ಟ್ರೀಟ್, ಕೋಡಿಕಲ್, ಆಕಾಶಭವನ ಇತ್ಯಾದಿ ಪ್ರದೇಶಗಳಲ್ಲಿ ನೀರಿನ ವಿತರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





