ಫೆ. 20: ಕುಂಬ್ರ ಮರ್ಕಝ್ ನಲ್ಲಿ ಎಸ್ ವೈ ಎಸ್ ಜಿಲ್ಲಾ ಸಮಾವೇಶ
ಪುತ್ತೂರು: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ ಜಿಲ್ಲಾ ಸಾಂಘಿಕ ಸಮಾವೇಶ ಫೆ. 20ರಂದು ಪುತ್ತೂರಿನ ಕುಂಬ್ರ ಮರ್ಕಝುಲ್ ಹುದಾ ಕ್ಯಾಂಪಸ್ ನಲ್ಲಿ ನಡೆಯಲಿದೆ.
ಮರ್ಕಝುಲ್ ಹುದಾ ಮಹಿಳಾ ಕಾಲೇಜ್ ನ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಅಬ್ದುಲ್ ರಹ್ಮಾನ್ ಹಾಜಿ ಅರಿಯಡ್ಕ ಧ್ವಜಾರೋಹಣ ನಡೆಸ ಲಿದ್ದಾರೆ. ಎಸ್ ವೈ ಎಸ್ ದ.ಕ. ಈಸ್ಟ್ಪು ತ್ತೂರು ಜಿಲ್ಲಾಧ್ಯಕ್ಷ ಅಬೂಬಕ್ಕರ್ ಸಹದಿ ಮಜೂರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸುನ್ನೀ ಜಮೀಯತುಲ್ ಉಲಮಾ ಕರ್ನಾಟಕ ಉಪಾಧ್ಯಕ್ಷ ಯುಕೆ ಮುಹಮ್ಮದ್ ಸ ಅದಿ ವಳವೂರು ಉದ್ಘಾಟನೆ ನಡೆಸಲಿದ್ದಾರೆ.
ಬೆಳಗ್ಗೆ 9.30 ರಿಂದ ಸಂಜೆ 4.30 ರವರೆಗೆ ರಾಜ್ಯದ ನಾಯಕರಿಂದ ವಿವಿಧ ತರಗತಿಗಳು ಮಂಡನೆಯಾಗಲಿವೆ. ಕೇರಳದ ಹೆಸರಾಂತ ವಾಗ್ಮಿ ಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಈಸ್ಟ್ ಜಿಲ್ಲೆಯ 20 ಸೆಂಟರ್ ಗಳ, 190 ರಷ್ಟು ಬ್ರಾಂಚ್ ಗಳ ಈಗಾಗಲೇ ಹೆಸರು ನೋಂದಾಯಿ ಸಿದ್ದು, ಸುಮಾರು ಸಾವಿರದ ಐನೂರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
Next Story





