ಫೆ. 20: ರೋಯಲ್ ಗೋಲ್ಡ್ ಪ್ರಶಸ್ತಿ ಪ್ರದಾನ, 'ಸದಾಶಿವಾಭಿನಂದನಾ' ಕಾರ್ಯಕ್ರಮ
ಪುತ್ತೂರು : ರೋಯಲ್ ಸೌಹಾರ್ದ ಸಹಕಾರಿ ಪುತ್ತೂರು ಇದರ ನೂತನ ಯೋಜನೆಗಳ ಘೋಷಣೆ, ರೋಯಲ್ ಗೋಲ್ಡ್ ಪ್ರಶಸ್ತಿ ಪ್ರದಾನ ಮತ್ತು 'ಸದಾಶಿವಾಭಿನಂದನಾ' ಕಾರ್ಯಕ್ರಮ ಫೆ. 20ರಂದು ಪುತ್ತೂರಿನ ಬಂಟರ ಭವನದಲ್ಲಿ ನಡೆಯಲಿದೆ ಎಂದು 'ಸದಾಶಿವಾಭಿನಂದನಾ' ಕಾರ್ಯಕ್ರಮದ ಗೌರವಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರೋಯಲ್ ಸೌಹಾರ್ದ ಸಹಕಾರಿ ಸಂಘವನ್ನು ಸ್ಥಾಪಿಸಿ, ಮುನ್ನಡೆಸಿದ್ದ ಸ್ಥಾಪಕಾಧ್ಯಕ್ಷ ದಂಬೆಕಾನ ಸದಾಶಿವ ರೈ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಗುತ್ತದೆ ಎಂದರು.
ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಸನ್ಮಾನ ನೆರವೇರಿಸಲಿದ್ದಾರೆ. ಎಸ್‍ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ವಿಧಿ ಬೋಧನೆ ನೆರವೇರಿಸಲಿದ್ದಾರೆ. ರೋಯಲ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶ್ರೀನಿವಾಸ್ ಎಂ.ಸಿ. ನೂತನ ಯೋಜನೆ ಘೋಷಣೆ ಮಾಡಲಿದ್ದಾರೆ.
ರಾಜ್ಯದ ಬಂದರು ಮತ್ತು ಮೀನುಗಾರಿಕೆ ಖಾತೆ ಸಚಿವರಾದ ಎಸ್. ಅಂಗಾರ ಅವರಿಗೆ ರೋಯಲ್ ಗೋಲ್ಡ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬ್ರಾಹ್ಮಣರ ಅಭಿವೃದ್ಧಿ ನಿಗಮದ ಸಚ್ಚಿದಾನಂದ ಮೂರ್ತಿ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ವೈದ್ಯರಾದ ಸುಧಾ ಎಸ್. ರಾವ್, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಸುದಾನ ಶಾಲೆಯ ಸಂಚಾಲಕರಾದ ರೆ. ವಿಜಯ ಹಾರ್ವಿನ್, ಉದ್ಯಮಿ ಗುಣರಂಜನ್ ಶೆಟ್ಟಿ, ನ್ಯಾಯವಾದಿ ಫಝಲ್ ರಹಿಮಾನ್, ಬಂಟರ ಸಂಘದ ತಾಲೂಕು ಸಂಚಾಲರಾದ ದಯಾನಂದ ರೈ ಮನವಳಿಕೆ, ಉದ್ಯಮಿಗಳಾದ ಗೋಪಾಲಕೃಷ್ಣ ಹೇರಳೆ, ಕೂರೇಲ್ ಸಂಜೀವ ಪೂಜಾರಿ, ನಿವೃತ್ತ ಬ್ಯಾಂಕ್ ಅಧಿಕಾರಿ ಎ.ಜೆ. ರೈ ಗೌರವ ಉಪಸ್ಥಿತಿ ಇರಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸದಾಶಿವಾಭಿನಂದನಾ' ಕಾರ್ಯಕ್ರಮದ ಕಾರ್ಯಾಧ್ಯಕ್ಷ ಎ.ಕೆ. ಜಯರಾಮ ರೈ, ಗೌರವ ಪ್ರಧಾನ ಕಾರ್ಯದರ್ಶಿ ಮಹೇಶ್ ಕಜೆ, ರೋಯಲ್ ಸೌಹಾರ್ಧ ಸಹಕಾರಿಯ ಪ್ರಧಾನ ಕಾರ್ಯದರ್ಶಿ ಆನಂದ ರೈ ಕಾರ್ಯನಿರ್ವಹಣಾ ಅಧಿಕಾರಿ ಯಶವಂತ್ ಉಪಸ್ಥಿತರಿದ್ದರು.







