ರವೂಫ್ ಶರೀಫ್ ಬಂಧನ ಆರೆಸ್ಸೆಸ್ ಕುತಂತ್ರ: ಸಿಎಫ್‍ಐ ಆರೋಪ
ಬೆಂಗಳೂರು, ಫೆ.18: ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ನಡೆದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರರ ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಸಿಎಫ್‍ಐ ಪ್ರಧಾನ ಕಾರ್ಯದರ್ಶಿ ರವೂಫ್ ಶರೀಫ್‍ರನ್ನು ಬಂಧಿಸಿರುವುದು ಆರೆಸ್ಸೆಸ್ ರೂಪಿಸಿರುವ ಕುತಂತ್ರವಾಗಿದೆ ಎಂದು ಸಿಎಫ್‍ಐ ಆರೋಪಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯು, ಹತ್ರಾಸ್ ಭೇಟಿ ನೀಡಿದ್ದನ್ನೆ ನೆಪವಾಗಿಟ್ಟುಕೊಂಡು ಉತ್ತರ ಪ್ರದೇಶ ಸರಕಾರ ಸಿಎಫ್‍ಐ ನಾಯಕನನ್ನು ಸುಳ್ಳು ಆರೋಪದಡಿ ಬಂಧಿಸಿದೆ. ಸರಕಾರ ಹಾಗೂ ಪೊಲೀಸ್ ಇಲಾಖೆ ಆರೆಸ್ಸೆಸ್ ಕುತಂತ್ರದಂತೆ ಕಾರ್ಯಾಚರಣೆ ಮಾಡುತ್ತಿದೆ ಆರೋಪಿಸಿದೆ.
ಬಿಜೆಪಿ ಸರಕಾರ ತನ್ನ ನಿಯಂತ್ರಣದಲ್ಲಿರುವ ವಿವಿಧ ರಾಜ್ಯಗಳನ್ನು, ವಿಶೇಷವಾಗಿ ಉತ್ತರ ಪ್ರದೇಶವನ್ನು ಫ್ಯಾಸಿಸ್ಟ್ ಕತ್ತಲಕೋಣೆಗಳನ್ನಾಗಿ ಮಾಡಿದೆ. ಅಸಂಖ್ಯಾತ ಉತ್ಸಾಹಭರಿತ ಯುವಕರನ್ನು ಮೋದಿ ಸರಕಾರ ಗಂಭೀರ ಆರೋಪದಲ್ಲಿ ಬಂಧಿಸಿದೆ. ರವೂಫ್ ಶರೀಫ್ ಅವರನ್ನು ಸುಳ್ಳು ಆರೋಪಗಳ ಅಡಿಯಲ್ಲಿ ಪದೇ ಪದೇ ಬುಕ್ ಮಾಡುವ ಮೂಲಕ ಅವರ ಬಿಡುಗಡೆಯನ್ನು ತಡೆಯಲಾಗುತ್ತಿದೆ. ಹೀಗಾಗಿ ಆರೆಸ್ಸೆಸ್ ಆಜ್ಞೆಯ ಮೇರೆಗೆ ಜೈಲಿನಲ್ಲಿದ್ದ ಎಲ್ಲ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕೆಂದು ಸಿಎಫ್‍ಐ ಒತ್ತಾಯಿಸಿದೆ.







