ಫೆ.24ಕ್ಕೆ ಬಂದರಿನ ಕೋಣೆಗಳ ಬೀಗ ತೆರವು
ಉಡುಪಿ, ಫೆ.19: ಕೊಡೇರಿ ಮೀನುಗಾರಿಕೆ ಬಂದರಿನ ಹರಾಜು ಪ್ರಾಂಗಣದಲ್ಲಿರುವ ಕೋಣೆಗಳಿಗೆ ಇಲಾಖೆಯ ಅನುಮತಿಯಿಲ್ಲದೆ ಬೀಗ ಹಾಕಿ ವಸ್ತುಗಳನ್ನು ಇರಿಸಿರುವುದು ಕಂಡು ಬಂದಿದೆ. ಸರಕಾರದಿಂದ ಮಂಜೂರಾಗಿರುವ ವಿದ್ಯುತ್ ಸೌಲ್ಯ ಕಾಮಗಾರಿ ನಡೆಸಲು ಕೋಣೆಗಳಿಗೆ ವಯ ರಿಂಗ್ ಮಾಡಬೇಕಾಗಿರುವುದರಿಂದ ಫೆ.23ರ ಒಳಗೆ ಇಲಾಖಾ ಅನುಮತಿಯಿಲ್ಲದೆ ಬೀಗ ಹಾಕಿದವರು ಇಲಾಖೆಗೆ ಬೀಗಕೈಗಳನ್ನು ಒಪ್ಪಿಸ ಬೇಕು. ಇಲ್ಲದಿದ್ದಲ್ಲಿ ಫೆ.24ರಂದು ಇಲಾಖೆಯಿಂದ ಬೀಗಗಳನ್ನು ತೆರವುಗೊಳಿಸಲಾಗುವುದು ಎಂದು ಕೊಡೇರಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





