ಫೆ. 23ಕ್ಕೆ ಸಾರ್ವಜನಿಕ ಸಮಾಲೋಚನಾ ಸಭೆ
ಉಡುಪಿ, ಫೆ.19:ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ಹೊಸದಾಗಿ ಕರ್ನಾಟಕ ನಗರ ಮೂಲ ಸೌಕರ್ಯದ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಬೆಂಗಳೂರು ಕ್ವಿಮಿಪ್ ಟ್ರಾಂಚ್-2 ಅಡಿಯಲ್ಲಿ ಉಡುಪಿ ನಗರದಲ್ಲಿ ಕೈಗೊಳ್ಳುವ 24 X 7 ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಕಾಮಗಾರಿಗಳ ಬಗ್ಗೆ ಮಣಿಪಾಲ ವಾರ್ಡ್‌ನ, ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಕೆಯುಐಡಿಎಫ್‌ಸಿ ಹಾಗೂ ಉಡುಪಿ ನಗರಸಬೆಯ ಸಹಯೋಗದೊಂದಿಗೆ, ಫೆ.23ರ ಸಂಜೆ 4:30ಕ್ಕೆ ಮಣಿಪಾಲ ಅನಂತನಗರದ ಹುಡ್ಕೋ ಕಾಲೋನಿಯ ಹುಡ್ಕೋ ಉದ್ಯಾನವನದಲ್ಲಿ ಆಯೋಜಿಸಲಾಗಿದೆ ಎಂದು ನಗರಸಬೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





