Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಗಣಿಗಾರಿಕೆ ನಿಯಮಗಳ ಸರಳೀಕರಣಕ್ಕೆ ಸಚಿವ...

ಗಣಿಗಾರಿಕೆ ನಿಯಮಗಳ ಸರಳೀಕರಣಕ್ಕೆ ಸಚಿವ ನಿರಾಣಿಗೆ ಕಲಬುರಗಿ ನಿಯೋಗದ ಮನವಿ

ಹೊರರಾಜ್ಯದಿಂದ ಸರಬರಾಜಾಗುವ ‘ಜಲ್ಲಿ' ತಕ್ಷಣದಿಂದಲೇ ತಡೆ ಹಿಡಿಯಲು ಒತ್ತಾಯ

ವಾರ್ತಾಭಾರತಿವಾರ್ತಾಭಾರತಿ19 Feb 2021 8:26 PM IST
share
ಗಣಿಗಾರಿಕೆ ನಿಯಮಗಳ ಸರಳೀಕರಣಕ್ಕೆ ಸಚಿವ ನಿರಾಣಿಗೆ ಕಲಬುರಗಿ ನಿಯೋಗದ ಮನವಿ

ಬೆಂಗಳೂರು, ಫೆ.19: ಜಲ್ಲಿ ಕ್ರಷರ್ ಮಿಷನ್ ಹಾಗೂ ಕಲ್ಲು ಗಣಿಗಾರಿಕೆಯಲ್ಲಿ ನಿಯಮಗಳ ಸರಳೀಕರಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕಲಬುರಗಿ ಜಿಲ್ಲಾ ಸ್ಟೋನ್ ಕ್ರಷರನ್ ಇಂಡಸ್ಟ್ರೀಸ್ ಅಸೋಸಿಯೇಷನ್ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಅವರಿಗೆ ಮನವಿ ಪತ್ರ ಸಲ್ಲಿಸಿತು.

ಶುಕ್ರವಾರ ವಿಕಾಸಸೌಧ ಸಚಿವರ ಕೊಠಡಿಯಲ್ಲಿ ವಿಧಾನಸಭೆ ವಿಪಕ್ಷ ಮುಖ್ಯಸಚೇತಕ ಹಾಗೂ ಜೇವರ್ಗಿ ಕ್ಷೇತ್ರದ ಶಾಸಕ ಡಾ.ಅಜಯ್ ಸಿಂಗ್ ನೇತೃತ್ವದ ನಿಯೋಗವು ಸಚಿವ ಮುರುಗೇಶ್ ನಿರಾಣಿ ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿತು. ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶವಾಗಿದ್ದ ಕಾರಣ ಪಟ್ಟಾ ಭೂಮಿ ಇಲ್ಲದೆ ಕಲ್ಲು ಗಣಿಗಾರಿಕೆ ಮಾಡಲು ಪಹಣಿ ಪತ್ರಿಕೆ ಹಾಗೂ ಭೂ ನಕಾಶೆ ಆಧಾರದ ಮೇಲೆ ಮೊದಲಿನಂತೆ ಪರವಾನಿಗೆ ಕೊಡಬೇಕು. ಗಣಿಗಾರಿಕೆಯ ಶೇ.90ರಷ್ಟು ರಾಯಲ್ಟಿ ಹಣ ಸರಕಾರದ ಬಿಲ್‍ನಲ್ಲಿ ಕಡಿತವಾಗಿದೆ. ಆದರೆ ಗಣಿ ಮತ್ತು ಜಲ್ಲಿ ಕಂಕರ್ ಮಿಷನ್ ಮಾಲಕರ ಹತ್ತಿರ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗಣಿಗಳನ್ನು ಅಳೆದು ರಾಯಲ್ಟಿ ಹಣ ವಸೂಲಿ ಮಾಡಿದ್ದಾರೆಂದು ಸಭೆಯ ಗಮನಕ್ಕೆ ತಂದರು.

ಜಲ್ಲಿ ಕಂಕರ್ ಮಿಷನ್ ಮಾಲಕರಿಂದ ಸರಬರಾಜು ಮಾಡಿದ ರಾಯಲ್ಟಿಯನ್ನು ಅವರ ಬಿಲ್‍ನಲ್ಲಿ ಕಡಿತ ಮಾಡಿದರೂ, ಮಾಲಕರ ಗಣಿಯನ್ನು ಡ್ರೋಣ್ ಕ್ಯಾಮೆರದ ಮೂಲಕ ಅಳೆಯಲು ರಾಯಲ್ಟಿ ಭರಿಸಲು ಅಧಿಕಾರಿಗಳು ನೋಟಿಸ್ ಹೊರಡಿಸಿದ್ದಾರೆ. ಸರಕಾರಿ ಉದ್ದೇಶಿತ ಕಾಮಗಾರಿ ಅಥವಾ ಸ್ವಂತ ಕಟ್ಟಡಕ್ಕಾಗಿ ಉಪಯೋಗಿಸಿದರೆ ಮಾತ್ರ ರಾಯಲ್ಟಿ ಭರಿಸಬೇಕೆಂಬ ನಿಯಮವಿದೆ ಎಂದು ನಿಯೋಗವು ಸಚಿವರಿಗೆ ಮನವರಿಕೆ ಮಾಡಿತು.

ಗುತ್ತಿಗೆದಾರರ ಬಿಲ್‍ನಲ್ಲಿ ಕಡಿತವಾದ ರಾಯಲ್ಟಿ ಹಣವನ್ನು ಜಲ್ಲಿ ಕಂಕರ್ ಸರಬರಾಜು ಮಾಡಿದ ಮಿಷನ್ ಮಾಲಕರ ರಾಯಲ್ಟಿ ಎಂದು ಪರಿಗಣಿಸುವುದು, ಜಲ್ಲಿಕಂಕರ್ ಅತಿ ಉಪಯುಕ್ತ ವಸ್ತು ಆಗಿರುವುದರಿಂದ ಅವಶ್ಯ ಸರಬರಾಜು ವಸ್ತು ಎಂದು ಪರಿಗಣಿಸಬೇಕೆಂದು ಒತ್ತಾಯಿಸಿದರು.

ರಾಯಲ್ಟಿ ಭರಿಸಿದ ಹಣಕ್ಕಿಂತ ಹೆಚ್ಚಿಗೆ ಗಣಿಗಾರಿಕೆ ಮಾಡಿದರೂ ದಂಡವಿಲ್ಲದೆ ರಾಯಲ್ಟಿ ಹಣ ಭರಿಸಿಕೊಳ್ಳುವುದು, ಗಣಿ ಮಾಲಕರು ಹೆಚ್ಚು ರಾಯಲ್ಟಿ ಹಣ ಕಟ್ಟಿ ಕಡಿಮೆ ಗಣಿಗಾರಿಕೆ ಮಾಡಿದರೆ ಆ ರಾಯಲ್ಟಿ ಹಣವನ್ನು ಮುಂದಿನ ಲೆಕ್ಕ ಪರಿಶೋಧನೆ ಮಾಡುವಾಗ ದಂಡವಿಲ್ಲದೆ ಸರಿಪಡಿಸಿಕೊಳ್ಳಬೇಕು ಎಂದು ಅಜಯ್ ಸಿಂಗ್ ಹೇಳಿದರು.

ಪಟ್ಟ ಭೂಮಿಗೆ ಡಿಎಂಎಫ್ ಹಣವನ್ನು ತೆಗೆದುಕೊಳ್ಳದಿರುವುದು, ಪಟ್ಟ ಭೂಮಿಗೆ ಎಟಿಟಿ ರದ್ದುಪಡಿಸುವುದು, ಐದು ಪಟ್ಟು ದಂಡ ಶುಲ್ಕ ರದ್ದು ಹಾಗೂ ಹೊರರಾಜ್ಯದಿಂದ ಸರಬರಾಜಾಗುವ ಜಲ್ಲಿ ಕಂಕರವನ್ನು ತಕ್ಷಣದಿಂದಲೇ ತಡೆ ಹಿಡಿಯಬೇಕೆಂದು ನಿಯೋಗವು ಒತ್ತಾಯ ಮಾಡಿತು.

ನಿಯೋಗದ ಬೇಡಿಕೆಗಳನ್ನು ಆಲಿಸಿದ ಸಚಿವ ಮುರುಗೇಶ್ ನಿರಾಣಿ, ಈ ಸಂಬಂಧ ಶೀಘ್ರದಲ್ಲೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದೆಂದು ಆಶ್ವಾಸನೆ ನೀಡಿದರು.

ನಿಯೋಗದಲ್ಲಿ ಗುಲ್ಬರ್ಗ ಜಿಲ್ಲಾ ಸ್ಟೋನ್ ಕ್ರಷರ್ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ನೀಲಕಂಠರಾವ್ ಎಸ್.ಮುಳಗಿ, ಉಪಾಧ್ಯಕ್ಷ ಪ್ರಭುದೇವ್ ಎಸ್.ಕಲ್ಬುರ್ಗಿ, ಪ್ರಧಾನ ಕಾರ್ಯದರ್ಶಿ ಆರ್.ಜಿ.ಪಾಟೀಲ್, ಕಾರ್ಯದರ್ಶಿ ಮನೋಹರ್ ಜಿ.ಗುತ್ತೇದಾರ, ಖಜಾಂಚಿ ಶಿವಯ್ಯ ಬಿ.ಗುತ್ತೇದಾರ್, ಜಂಟಿ ಕಾರ್ಯದರ್ಶಿ ಅಬ್ದುಲ್ ಶುಕಲ್ ಸಾಬ್ ಮಾಮು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X