ಉಡುಪಿ: ದಿನದಲ್ಲಿ 938 ಮಂದಿಗೆ ಕೋವಿಡ್ ಲಸಿಕೆಯ 2ನೇ ಡೋಸ್
ಉಡುಪಿ : ಜಿಲ್ಲೆಯ 938 ಮಂದಿ ಆರೋಗ್ಯ ಕಾರ್ಯಕರ್ತರು ಶುಕ್ರವಾರ ಕೋವಿಡ್‌ಗಿರುವ ಕೊವಿಶೀಲ್ಡ್ ಲಸಿಕೆಯ ಎರಡನೇ ಡೋಸ್‌ನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿರುವ 23889 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಇದುವರೆಗೆ ಒಟ್ಟು 1677 ಮಂದಿ ಮೊದಲ ಡೋಸ್‌ನ್ನು ಪಡೆದ 28 ದಿನಗಳ ಬಳಿಕ ನೀಡಲಾಗುವ ಎರಡನೇ ಡೋಸ್‌ನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಶೇ.7 ಗುರಿಯನ್ನು ಮುಟ್ಟ ಲಾಗಿದೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.
ಜಿಲ್ಲೆಯ ವೈದ್ಯರೂ ಸೇರಿದಂತೆ 23,889 ಮಂದಿ ಆರೋಗ್ಯ ಕಾರ್ಯಕರ್ತರಿಗೆ ನೀಡುವ ಮೊದಲ ಹಂತದ ಮೊದಲ ಡೋಸ್ ಲಸಿಕೆಯನ್ನು ಇಂದು 76 ಮಂದಿ ಪಡೆದಿದ್ದು, ಈ ಮೂಲಕ ಇದುವರೆಗೆ ಒಟ್ಟು 16,066 ಮಂದಿ (ಶೇ.67.3) ಲಸಿಕೆ ಪಡೆದಿದ್ದಾರೆ.
ಇದೀಗ ಎರಡನೇ ಹಂತದಲ್ಲಿ ಜಿಲ್ಲೆಯ 4283 ಮಂದಿ ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತಿರುವ ಕೋವಿಡ್ ಲಸಿಕೆಯನ್ನು ಶುಕ್ರವಾರ 130 ಮಂದಿ ಪಡೆಯುವ ಮೂಲಕ ಇಂದಿನವರೆಗೆ ಒಟ್ಟು 2,225 (ಶೇ.51.9) ಮಂದಿ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಇಲಾಖೆ ತಿಳಿಸಿದೆ.
Next Story





