ಮಂಗಳೂರು-ಮಡಗಾಂವ್ ಪ್ಯಾಸೆಂಜರ್ ರೈಲುಗಳ ಪುನರಾರಂಭಕ್ಕೆ ರೈಲ್ವೆ ಯಾತ್ರಿ ಸಂಘ ಮನವಿ
ಉಡುಪಿ, ಫೆ.19: ಪಶ್ಚಿಮ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆ ಗಳಲ್ಲಿ ಈಗ ಕೊರೋನದ ತೀವ್ರತೆ ಕಡಿಮೆಯಾ ಗಿರುವುದರಿಂದ ಮಂಗಳೂರು ಹಾಗೂ ಮಡಗಾಂವ್‌ಗಳ ನಡುವೆ ಓಡುವ ಪ್ಯಾಸೆಂಜರ್ ರೈಲನ್ನು ಪುನರಾರಂಭಿಸುವಂತೆ ಉಡುಪಿಯ ರೈಲ್ವೆ ಯಾತ್ರಿ ಸಂಘ ಕೇಂದ್ರ ರೈಲ್ವೇ ಸಚಿವರಿಗೆ ಮನವಿ ಪತ್ರ ಬರೆದಿದೆ.
ಮಂಗಳೂರು-ಮಡಗಾಂವ್ ನಡುವೆ ಒಟ್ಟು 28 ರೈಲ್ವೆ ನಿಲ್ದಾಣಗಳಿದ್ದು, ಇಲ್ಲಿ ಸಾವಿರಾರು ಮಂದಿ ತಮ್ಮ ದೈನಂದಿನ ವ್ಯವಹಾರ, ಶಿಕ್ಷಣ, ಉದ್ಯೋಗ ನಿಮಿತ್ತ ಪ್ರತಿ ದಿನ ಓಡಾಡುವುದರಿಂದ ಈ ರೈಲುಗಳ ಓಡಾಟದಿಂದ ಅವರಿಗೆ ಅನುಕೂಲವಾಗಲಿದೆ. ಆದುದರಿಂದ ರೈಲು ನಂ.56640/56641 ಮಂಗಳೂರು-ಮಡಗಾಂವ್ ಹಾಗೂ ನಂ. 70105/70106 ಮಡಗಾಂವ್-ಮಂಗಳೂರು ಪ್ಯಾಸೆಂಜರ್ ರೈಲನ್ನು ಶೀಘ್ರವೇ ಪ್ರಾರಂಭಿಸುವಂತೆ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್.ಡಯಾಸ್ ಫೆ.10ರಂದು ಸಚಿವರಿಗೆ ಬರೆದ ರಿಜಿಸ್ಟರ್ಡ್ ಪತ್ರದಲ್ಲಿ ಆಗ್ರಹಿಸಿದ್ದಾರೆ.
Next Story





