ರೈಲ್ವೆ ಗೂಡ್ಸ್ ಯಾರ್ಡ್‌ನಲ್ಲಿ ವ್ಯಕ್ತಿಯ ಶವಪತ್ತೆ : ಕೊಲೆ ಶಂಕೆ !
ಮಂಗಳೂರು, ಫೆ.19: ನಗರದ ಬಂದರ್ ರೈಲ್ವೆ ಗೂಡ್ಸ್ ಯಾರ್ಡ್ ಪ್ರದೇಶದ ಕೊನೆಯ ಭಾಗದಲ್ಲಿ ಕೊಂಪೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ ಯಾಗಿದ್ದು, ಪೊಲೀಸರು ಕೊಲೆ ಶಂಕೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸುಮಾರು 40 ವರ್ಷದ ಈ ವ್ಯಕ್ತಿ ಮೀನುಗಾರಿಕಾ ಬೋಟ್‌ಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ತಲೆ ಮತ್ತು ಕಿವಿ ಭಾಗದಲ್ಲಿ ಯಾವುದೋ ವಸ್ತುವಿನಿಂದ ಹೊಡೆದು ಕೊಲೆ ಮಾಡಿರುವುದು ಕಂಡುಬಂದಿದೆ.
ಚಹರೆ: ವ್ಯಕ್ತಿ ಸುಮಾರು 5 ಅಡಿ ಎತ್ತರವಿದ್ದು, ಎಣ್ಣೆಗೆಂಪು ಮೈಬಣ್ಣ, ದುಂಡುಮುಖ, ಉದ್ದದ ತಲೆಕೂದಲು, ಸಾಧಾರಣ ಮೈಕಟ್ಟು ಹೊಂದಿ ದ್ದಾರೆ. ಸಿಮೆಂಟ್ ಬಣ್ಣದ ಅರ್ಧತೋಳಿನ ಟಿ-ಶರ್ಟ್, ಕಪ್ಪು ಬಣ್ಣದ ಚಡ್ಡಿ ಧರಿಸಿದ್ದಾರೆ. ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ರೈಲ್ವೆ ಪೊಲೀಸ್ ಠಾಣೆ (0824-2220559) ಅಥವಾ ಪೊಲೀಸ್ ನಿರೀಕ್ಷಕರನ್ನು (9480800470) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





