ಕಂಕನಾಡಿ : ಫೆ.21ರಂದು ಎಸ್.ಕೆ.ಎಸ್.ಎಮ್ ವತಿಯಿಂದ ರಕ್ತದಾನ ಶಿಬಿರ

ಮಂಗಳೂರು : ಎಸ್.ಕೆ.ಎಸ್.ಎಮ್. ಸೋಶಿಯಲ್ ಸರ್ವಿಸ್ ವತಿಯಿಂದ ಕೆ.ಎಂ.ಸಿ. ಬ್ಲಡ್ ಬ್ಯಾಂಕ್ ಸಂಯೋಜನೆಯೊಂದಿಗೆ ಕಂಕನಾಡಿ ಮಾರ್ಕೇಟ್ ಬಳಿಯ ಸಲಫಿ ಸೆಂಟರಿನಲ್ಲಿ ಫೆ. 21 ರಂದು ಬೆಳಗ್ಗೆ 9ಕ್ಕೆ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.
ರಕ್ತ ದಾನ ಮಾಡಲು ಆಸಕ್ತಿಯುಳ್ಳವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ತಿಳಿಸಲಾಗಿದ್ದು, http://www.tinyurl.com/sksmbloodcampreg ಈ ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಾವಣೆ ಮಾಡಬಹುದು. ಮಧುಮೇಹ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ ಮತ್ತು ರಕ್ತ ಗುಂಪು ವರ್ಗೀಕರಣ ಉಚಿತವಾಗಿ ತಪಾಸಣೆ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಚಂದ್ರಹಾಸ್ ಕದ್ರಿ (ಅಧ್ಯಕ್ಷರು, ಲಯನ್ಸ್ ಕ್ಲಬ್ ಮಂಗಳೂರು, ಮಂಗಳಾದೇವಿ), ಡಾ. ದೀಪಾ ಅಡಿಗ (ಡೈರಕ್ಟರ್, ಕ.ಎಮ್.ಸಿ, ಬ್ಲಡ್ ಬ್ಯಾಂಕ್), ನವೀನ್ ಆರ್. ಡಿಸೋಝ (ಕಾರ್ಪೋರೇಟರ್, ಕಂಕನಾಡಿ ವಾರ್ಡ್), ಶೇಖ್ ಕರ್ನಿರೆ (ಎಕ್ಸ್ ಪರ್ಟೈಸ್ ಸೌದಿ ಅರೇಬಿಯಾ), ಬಶೀರ್ ಸಾಗರ್ (ಸಿಇಒ ಸ್ಯೋಕೊ, ಸೌದಿ ಅರೇಬಿಯಾ), ರಿಯಾಝ್ ಬಾವಾ (ಎಂಡಿ, ಬಿಎಎಫ್ ಸಿಒ) ಕಾಸಿಮ್ ಅಹ್ಮದ್ ಎಚ್.ಕೆ, ಬಶೀರ್ ಅಹ್ಮದ್ ಶಾಲಿಮಾರ್, ಕೆ.ಅಬ್ದುಲ್ ರಹಿಮಾನ್, ಯಾಕೂಬ್ ಅಡ್ಯಾರ್ ಮುಂತಾದವರು ಭಾಗವಹಿಸಲಿದ್ದಾರೆಂದು ಎಸ್.ಕೆ.ಎಸ್.ಎಮ್ ಸಮಾಜ ಸೇವಾ ವಿಂಗ್ ಸಂಚಾಲಕರಾದ ಅಬ್ದುಲ್ ಲತೀಫ್ ಕುದ್ರೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಾಹಿತಿಗಾಗಿ ಸಂಪರ್ಕಿಸಿ - ಅಬ್ದುಲ್ ಲತೀಫ್ ಕುದ್ರೋಳಿ - 8050131466 ಸಂಪರ್ಕಿಸಬಹುದು.







