ಪುತ್ತೂರು : ಎಸ್‌ಡಿಟಿಯು ಅಟೋ ಚಾಲಕರ ಯೂನಿಯನ್ ವತಿಯಿಂದ ಪ್ರತಿಭಟನೆ
ಇಂಧನ ಬೆಲೆ ಏರಿಕೆಗೆ ವಿರೋಧ

ಪುತ್ತೂರು : ಪೆಟ್ರೋಲ್, ಡೀಸೆಲ್, ಆಟೋ ಎಲ್ಪಿಜಿ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯನ್ನು ಖಂಡಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಎಸ್ ಡಿಟಿಯು ಆಟೋ ಚಾಲಕರ ಯೂನಿಯನ್ ವತಿಯಿಂದ ಶುಕ್ರವಾರ ಸಂಜೆ ಪುತ್ತೂರಿನಲ್ಲಿ ಪ್ರತಿಭಟನೆ ಹಾಗೂ ಜಾಥಾ ನಡೆಸಲಾಯಿತು.
ನಗರದ ಬೈಪಾಸ್ ವೃತ್ತದಿಂದ ಕಾಲ್ನಡಿಗೆ ಜಾಥಾ ಆರಂಭಗೊಂಡು ದರ್ಬೆ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಚಾಲಕರು ತಮ್ಮ ಆಟೋವನ್ನು ತಳ್ಳುವ ಮೂಲಕ ಇಂಧನ ಬೆಲೆಯೇರಿಕೆಯನ್ನು ತೀವ್ರವಾಗಿ ಖಂಡಿಸಿದರು. ಪ್ರತಿಭಟನೆಯ ಅಧ್ಯಕ್ಷತೆಯನ್ನು ಎಸ್ ಡಿಟಿಯು ಅಟೋ ಚಾಲಕರ ಯೂನಿಯನ್ ಅಧ್ಯಕ್ಷರಾದ ಶಮೀರ್ ಕೂರ್ನಡ್ಕ ವಹಿಸಿದರು. ಎಸ್ ಡಿಟಿಯು ದ.ಕ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದಾತ್ ಮುಖ್ಯ ಭಾಷಣ ಮಾಡಿದರು. ಎಸ್ ಡಿಟಿಯು ದ.ಕ ಜಿಲ್ಲಾ ಅಧ್ಯಕ್ಷರಾದ ಖಾದರ್ ಫರಂಗಿಪೇಟೆ , ಎಸ್ ಡಿಟಿಯು ಪುತ್ತೂರು ವಿಧಾನಸಭಾ ಅಧ್ಯಕ್ಷರಾದ ಸಿದ್ದೀಕ್ ಕೆ.ಎ , ಎಸ್ ಡಿಟಿಯು ಪುತ್ತೂರು ತಾಲೂಕು ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಾಲ್ಮರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಎಸ್ ಡಿಟಿಯು ಪುತ್ತೂರು ತಾಲೂಕು ಕಾರ್ಯದರ್ಶಿ ರಿಯಾಝ್ ಬಳಕ್ಕ ಎಸ್ ಡಿಟಿಯು ಪುತ್ತೂರು ವಿಧಾನಸಭಾ ಉಪಾಧ್ಯಕ್ಷರಾದ ಇಬ್ರಾಹಿಂ ಸಾಗರ್ ಕಾರ್ಯದರ್ಶಿ ಯಹ್ಯಾ ಕೂರ್ನಡ್ಕ ಹಾಗೂ ಅಟೋ ಯೂನಿಯನ್ ಕಾರ್ಯದರ್ಶಿ ಆಸಿಫ್ ಮುಕ್ವೆ ಮತ್ತಿತರರು ಉಪಸ್ಥಿತರಿದ್ದರು. ಬಾತಿಷ್ ಬಡಕ್ಕೋಡಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.





