ನೇರಪ್ರಸಾರದ ವೇಳೆ ವರದಿಗಾರನನ್ನು ದರೋಡೆ ಮಾಡಿದ ವ್ಯಕ್ತಿ!

ಫೋಟೊ ಕೃಪೆ: twitter.com/Diegordinola
ಕ್ವಿಟೊ (ಇಕ್ವೆಡಾರ್), ಫೆ. 19: ನೇರ ಸುದ್ದಿ ಪ್ರಸಾರವೊಂದರ ವೇಳೆ, ಓರ್ವ ಟಿವಿ ವರದಿಗಾರ ಮತ್ತು ಸಿಬ್ಬಂದಿಯನ್ನು ವ್ಯಕ್ತಿಯೋರ್ವ ಬಂದೂಕು ತೋರಿಸಿ ದರೋಡೆಗೈದ ಘಟನೆ ದಕ್ಷಿಣ ಅವೆುರಿಕ ಖಂಡದ ಪಶ್ಚಿಮ ಕರಾವಳಿಯ ದೇಶ ಇಕ್ವೆಡಾರ್ನಲ್ಲಿ ಕಳೆದ ವಾರ ನಡೆದಿದೆ.
ದರೋಡೆಯ ನೇರಪ್ರಸಾರವನ್ನು ತೋರಿಸುವ ವೀಡಿಯೊ ತುಣುಕು ಈಗ ಎಲ್ಲೆಡೆ ಹರಡಿದೆ. ನಿಮ್ಮಲ್ಲಿರುವ ಹಣವನ್ನು ನನಗೆ ಕೊಡಿ ಎಂದು ಹೇಳಿ ದರೋಡೆಕೋರನು ಬಂದೂಕನ್ನು ವರದಿಗಾರ ಮತ್ತು ಟಿವಿ ಸಿಬ್ಬಂದಿಯತ್ತ ಹಿಡಿಯುವುದನ್ನು ವೀಡಿಯೊ ತೋರಿಸುತ್ತದೆ.
ಇಕ್ವೆಡಾರ್ನ ಕ್ರೀಡಾ ವರದಿಗಾರ ಡೀಗೊ ಓರ್ಡಿನೊಲ ‘ಡೈರೆಕ್ಟ್ ಟಿವಿ ಸ್ಪೋರ್ಟ್ಸ್’ ಚಾನೆಲ್ಗಾಗಿ ಕಳೆದ ವಾರದ ಶುಕ್ರವಾರ ಗ್ವಾಯಕ್ವಿಲ್ ನಗರದ ಎಸ್ಟಾಡಿಯೊ ಮಾನ್ಯುಮೆಂಟಲ್ನ ಹೊರಗೆ ವರದಿ ಮಾಡುತ್ತಿದ್ದು, ಅದು ನೇರೆಪ್ರಸಾರಗೊಳ್ಳುತ್ತಿತ್ತು. ಆಗ ಮುಖಗವಸು ಹಾಕಿಕೊಂಡಿದ್ದ ದರೋಡೆಕೋರನು ಪ್ರತ್ಯಕ್ಷನಾಗಿ ಓರ್ಡಿನೋಲರ ಮುಖಕ್ಕೆ ಬಂದೂಕು ಹಿಡಿದು ‘ಟೆಲಿಫೋನ್ ಕೊಡು’ ಎಂದು ಕಿರುಚಿದನು.
ಬಳಿಕ ಕ್ಯಾಮರಾಮನ್ ಮತ್ತು ಇತರ ಸಿಬ್ಬಂದಿಯತ್ತ ಬಂದೂಕು ತೋರಿಸಿ ಪರ್ಸ್ ಮತ್ತು ಫೋನ್ಗಳನ್ನು ಕೊಡುವಂತೆ ಸೂಚಿಸಿದನು.
ನೇರ ಸುದ್ದಿಪ್ರಸಾರವನ್ನು ದಾಖಲುಮಾಡುತ್ತಿದ್ದ ಕ್ಯಾಮರಾ ಈ ಎಲ್ಲ ದೃಶ್ಯಗಳನ್ನು ಸೆರೆಹಿಡಿದಿದೆ. ಘಟನೆಯ ಬಗ್ಗೆ ವ್ಯಾಪಕ ಕಳವಳ ವ್ಯಕ್ತವಾಗಿದೆ.
Ni siquiera podemos trabajar tranquilos, esto ocurrió a las 13:00 de hoy en las afueras del Estadio Monumental.
— Diego Ordinola (@Diegordinola) February 12, 2021
La @PoliciaEcuador se comprometió a dar con estos delincuentes. #Inseguridad pic.twitter.com/OE2KybP0Od