ಅಮೆರಿಕದ ವಲಸೆ ಸುಧಾರಣೆ ಮಸೂದೆ ಸಂಸತ್‌ನಲ್ಲಿ ಮಂಡನೆ
ವಾಶಿಂಗ್ಟನ್, ಫೆ. 19: ಅಮೆರಿಕ ಅಧ್ಯಕ್ಷ ಜೋ ಬೈಡನ್‌ರ ವಲಸೆ ಸುಧಾರಣೆಗಳ ಮಸೂದೆಯನ್ನು ಅಮೆರಿಕದ ಸಂಸತ್ತಿನಲ್ಲಿ ಗುರುವಾರ ಮಂಡಿಸಲಾಯಿತು.
‘ಅಮೆರಿಕ ಪೌರತ್ವ ಕಾಯಿದೆ 2021’ ಎಂಬ ಹೆಸರಿನ ಮಸೂದೆಯು, ತಾನು ಅಧಿಕಾರ ಸ್ವೀಕರಿಸಿದ ಮೊದಲ ದಿನದಂದು ಬೈಡನ್ ಸಂಸತ್ತಿಗೆ ಕಳುಹಿಸಿದ ಟಿಪ್ಪಣಿಗಳ ಮಾದರಿಯಲ್ಲೇ ಇದೆ.
ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಸುಮಾರು 1.1 ಕೋಟಿ ವಲಸಿಗರ ಪೈಕಿ ಹೆಚ್ಚಿನವರು ಪೌರತ್ವ ಪಡೆಯಲು 8 ವರ್ಷಗಳ ಪ್ರಕ್ರಿಯೆಗೆ ಒಳಪಡಬೇಕು ಎಂದು ಮಸೂದೆ ಹೇಳುತ್ತದೆ.
ಅದೂ ಅಲ್ಲದೆ, ದೇಶದ ನಿರಾಶ್ರಿತ ಮತ್ತು ಆಶ್ರಯ ವ್ಯವಸ್ಥೆಗಳನ್ನು ಬಲಪಡಿಸಲು ಅದು ಒತ್ತುನೀಡುತ್ತದೆ ಹಾಗೂ ದಕ್ಷಿಣದ ಗಡಿಯನ್ನು ಸಂರಕ್ಷಿಸಲು ಹೆಚ್ಚುವರಿ ತಂತರಜ್ಞಾನವನ್ನು ಬಳಸಗಬೇಕೆಂದೂ ಅದು ಕರೆ ನೀಡುತ್ತದೆ.
Next Story