ಐಐಐಡಿ ಮಂಗಳೂರು ಪ್ರಾದೇಶಿಕ ಕೇಂದ್ರ ಶುಭಾರಂಭ

ಮಂಗಳೂರು, ಫೆ.20: ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಇಂಟೀರಿಯರ್ ಡಿಸೈನರ್ಸ್ (ಐಐಐಡಿ) ಸಂಸ್ಥೆಯ ಮಂಗಳೂರು ಪ್ರಾದೇಶಿಕ ಕೇಂದ್ರವು (ಎಂಎಲ್‌ಆರ್‌ಸಿ) ನಗರದ ಈಡನ್ ಕ್ಲಬ್‌ನಲ್ಲಿ ಶನಿವಾರ ಸಂಜೆ ಶುಭಾರಂಭಗೊಂಡಿತು.
ಐಐಐಡಿ ಬೆಂಗಳೂರು ಚಾಪ್ಟರ್ (ಬಿಆರ್‌ಸಿ) ಹಾಗೂ ಎ.ಕೆ.ಗ್ರೂಪ್ ಸಹಯೋಗದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಇದು ಭಾರತದಲ್ಲೇ ಸುಧಾರಿತ ಇಂಟೀರಿಯರ್ ಡಿಸೈನ್‌ಗೆ ಹೆಸರುವಾಸಿಯಾಗಿರುವ ಐಐಐಡಿಯ 33ನೇ ಪ್ರಾದೇಶಿಕ ಕೇಂದ್ರವಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ಆರ್ಕಿಟೆಕ್ಟ್ ತನುಜಾ ಕಾನ್ವಿಂಡೆ ಮಾತನಾಡಿ, ದೇಶದಲ್ಲಿ ಇಂಟೀರಿಯರ್ ಡಿಸೈನ್ ಕ್ಷೇತ್ರದಲ್ಲಿ ಐಐಐಡಿ ತನ್ನದೇ ಆದ ಚಾಪು ಮೂಡಿಸಿದೆ. ಇದೊಂದು ಅಂತರ್‌ರಾಷ್ಟ್ರೀಯ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು, ವಿಶ್ವಾದ್ಯಂತ ತನ್ನ ಪ್ರಾದೇಶಿಕ ಕೇಂದ್ರ ತೆರೆದು, ಉತ್ತಮ ಗುಣಮಟ್ಟದ ಕಾರ್ಯ ನಿರ್ವಹಣೆಗೆ ಸಾಕ್ಷಿಯಾಗಿದೆ ಎಂದರು.
ಇದಕ್ಕೂ ಮೊದಲು ಐಐಐಡಿಯ ಮಂಗಳೂರು ಪ್ರಾದೇಶಿಕ ಕೇಂದ್ರದ ನೂತನ ಪದಾಧಿಕಾರಿಗಳಿಗೆ ತನುಜಾ ಕಾನ್ವಿಂಡೆ ಪ್ರತಿಜ್ಞಾವಿಧಿ ಬೋಧಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಆರ್ಕಿಟೆಕ್ಟ್ ವಿ.ವಿಶ್ವನಾಥ್ ಇಂಟೀರಿಯರ್ ಡಿಸೈನ್‌ನ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಐಐಐಡಿಯ ರಾಷ್ಟ್ರೀಯ ಗೌರವ ಕಾರ್ಯದರ್ಶಿ ಆರ್ಕಿಟೆಕ್ಟ್ ಜಿಗ್ನೇಶ್ ಮೋದಿ, ರಾಷ್ಟ್ರೀಯ ಗೌರವ ಜಂಟಿ ಕಾರ್ಯದರ್ಶಿ ಗಾಯತ್ರಿ ಶೆಟ್ಟಿ, ಎನ್‌ಇಸಿ ಮೆಂಬರ್ ಆ್ಯಂಡ್ ಬಿಆರ್‌ಸಿ ಮೆಂಟರ್ ಆರ್ಕಿಟೆಕ್ಟ್ ರಾಹುಲ್ ದವಿ, ಎನ್‌ಇಸಿ ಮೆಂಬರ್ ಆರ್ಕಿಟೆಕ್ಟ್ ಶ್ಯಾಮಲಾ ಪ್ರಭು, ಬಿಆರ್‌ಸಿ ಚೇರ್ ಪರ್ಸನ್ ದಿನೇಶ್ ವರ್ಮಾ, ಎಂಎಲ್‌ಆರ್‌ಸಿ ಚೇರ್‌ಪರ್ಸನ್ ಆರ್ಕಿಟೆಕ್ಟ್ ಮುಹಮ್ಮದ್ ನಿಸಾರ್ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಎ.ಕೆ. ಗ್ರೂಪ್‌ನ ಚೇರ್‌ಮನ್ ಎ.ಕೆ.ಅಹ್ಮದ್, ಎ.ಕೆ.ನಿಯಾಝ್, ಎ.ಕೆ. ನೌಶಾದ್, ಎ.ಕೆ.ನಾಝಿಮ್, ಎ.ಕೆ. ಸಾಜಿದ್ ಮತ್ತಿತರರು ಉಪಸ್ಥಿತರಿದ್ದರು.
ಬಿಆರ್‌ಸಿ ಚೇರ್‌ಪರ್ಸನ್ ದಿನೇಶ್ ವರ್ಮಾ ಸ್ವಾಗತಿಸಿದರು. ಆರ್ಕಿಟೆಕ್ಟ್ ನಿಕಿಲ್‌ರಾಜ್ ಕಾರ್ಯಕ್ರಮ ನಿರೂಪಿಸಿದರು. ಎಂಎಲ್‌ಆರ್‌ಸಿಯ ಕಾರ್ಯದರ್ಶಿ ಆರ್ಕಿಟೆಕ್ಟ್ ಅನಿಲ್ ಪೈ ವಂದಿಸಿದರು.














