ಸಿವಿಲ್ ಗುತ್ತಿಗೆದಾರ ನಾಪತ್ತೆ
ಮಂಗಳೂರು, ಫೆ.21: ನಗರದ ಹೊರವಲಯದ ಸೋಮೇಶ್ವರ ಉಚ್ಚಿಲ ನಿವಾಸಿ ಸಿವಿಲ್ ಗುತ್ತಿಗೆದಾರ ಜಯರಾಜ್ ಆರ್.ಉಚ್ಚಿಲ್ ಎಂಬವರು ನಾಪತ್ತೆಯಾಗಿದ್ದಾರೆ.
ಮಂಗಳೂರು, ಉಡುಪಿ ಹಾಗೂ ಕಾಪು ಮೊದಲಾದ ಕಡೆ ಕೆಲಸ ಮಾಡಿಕೊಂಡಿದ್ದ ಜಯರಾಜ್ ಮನೆಯಿಂದ ಕೆಲಸಕ್ಕೆಂದು ಫೆ.8ರಂದು ತೆರಳಿದ್ದರು. ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಆತ ಕೆಲಸ ಮಾಡುವ ಸ್ಥಳಗಳಲ್ಲಿ ಹಾಗೂ ಸ್ನೇಹಿತರಲ್ಲಿ, ಸಂಬಂಧಿಕರ ಮನೆಯಲ್ಲಿ ವಿಚಾರಿಸಿದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





