ಫೆ.23: ರಾಷ್ತ್ರೀಯ ಜಾದೂ ದಿನಾಚರಣೆ
ಮಂಗಳೂರು, ಫೆ.21: ಭಾರತೀಯ ಜಾದೂ ರಂಗದ ಪಿತಾಮಹರೆಂದು ಪರಿಗಣಿಸಲಾಗುವ ಪದ್ಮಶ್ರೀ ಪುರಸ್ಕ್ರತ ವಿಶ್ವ ಪ್ರಸಿದ್ದ ಜಾದೂಗಾರ ಪಿ.ಸಿ.ಸರ್ಕಾರ್ ಅವರ 109ನೇ ಜನ್ಮ ದಿನದ ನೆನಪಿಗೆ ವಿಸ್ಮಯ ಜಾದೂ ಪ್ರತಿಷ್ಠಾನ ಮತ್ತು ರಾಮಕೃಷ್ಣ ಮಠ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಫೆ.23ರಂದು ಸಂಜೆ 6ಕ್ಕೆ ರಾಷ್ಟ್ರೀಯ ಜಾದೂ ದಿನಾಚರಣೆ ಕಾರ್ಯಕ್ರಮವು ನಗರದ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ.
ರಾಮಕ್ರಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಅವರ ಉಪಸ್ಥಿತಿಯಲ್ಲಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ತಿನ ಮಾಜಿ ಸದಸ್ಯ ಗಣೇಶ್ ಕಾರ್ನಿಕ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ದ.ಕ.ಜಿಲ್ಲಾ ಸಹಾಯಕ ನಿರ್ದೇಶಕ ರಾಜೇಶ್ ಬಿ, ಮಾಜಿ ಮೇಯರ್ ದಿವಾಕರ್ ಕದ್ರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭ ವಿಸ್ಮಯ ಜಾದೂ ಪ್ರತಿಷ್ಠಾನದ ವತಿಯಿಂದ ಜಾದೂ ರಂಗದ ಸಾಧಕರಿಗೆ ಕೊಡಮಾಡುವ 2021ನೇ ಸಾಲಿನ ಐಂದ್ರಜಾಲಿಕ ಪ್ರಶಸ್ತಿಯನ್ನು ಹಿರಿಯ ಜಾದೂಗಾರ ಕಾಸರಗೋಡಿನ ಪ್ರೊ. ಮಾಧವ ಅವರಿಗೆ ನೀಡಿ ಗೌರವಿಸಲಾಗುವುದು.
ಪ್ರಸಿದ್ದ ಜಾದೂಗಾರರಾದ ಕುದ್ರೋಳಿ ಗಣೇಶ್, ಸತೀಶ್ ಹೆಮ್ಮಾಡಿ, ರಾಜೇಶ್ ಮಳಿ, ಯುವ ಜಾದೂಗಾರ ಸೂರಜ್ ಚೌಟ, ಕಿರಿಯ ವಯಸ್ಸಿನಲ್ಲಿ ದಾಖಲೆ ನಿರ್ಮಿಸಿದ ಅಂಜನಾ ಮತ್ತು ಅಪೂರ್ವ ಮಳಿ ಅವರಿಂದ ಜಾದೂ ಪ್ರದರ್ಶನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.





