ಫೆ.24-27: ಮಳಲಿ ಪೇಟೆ ಮಸೀದಿ ಉರೂಸ್
ಮಂಗಳೂರು, ಫೆ.22: ಮಂಗಳೂರು ತಾಲೂಕು ತೆಂಕುಳಿಪಾಡಿ ಗ್ರಾಮದ ಮಳಲಿ ಜುಮಾ ಮಸೀದಿಯಲ್ಲಿ ಅಸ್ಸೈಯದ್ ಅಬ್ದುಲ್ಲಾಹಿಲ್ ಮದನಿ ಅವರ ಹೆಸರಿನಲ್ಲಿ 3 ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭ ಫೆ.24ರಿಂದ 27ರವರೆಗೆ ಜರಗಲಿದೆ ಎಂದು ಮಳಲಿ ಜುಮ್ಮಾ ಮಸೀದಿ ಅಧ್ಯಕ್ಷ ಮಾಮು ಮಣೇಲ್ ತಿಳಿಸಿದ್ದಾರೆ.
ಫೆ.24ರಂದು ಬೆಳಗ್ಗೆ 9.30ಕ್ಕೆ ಮಳಲಿ ಮಸೀದಿ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷ ಜನಾಬ್ ಎಂ.ಯೂಸುಫ್ ಹಾಜಿ ಧ್ವಜಾರೋಹಣ ಮಾಡಲಿದ್ದು ಸಂಜೆ ಮಗ್ರಿಬ್ ನಮಾಝ್‌ನ ಅನಂತರ ಉರೂಸ್ ಸಮಾರಂಭದ ಉದ್ಘಾಟನೆ ಹಾಗೂ ದುವಾ ಆಶೀರ್ವಚನವನ್ನು ಬಹು ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಝರಿ ಖಾಝಿ ಮಂಗಳೂರು ಇವರು ನೆರವೇರಿಸಲಿದ್ದಾರೆ. ಮಳಲಿ ಜುಮಾ ಮಸೀದಿ ಖತೀಬರಾದ ಝುಬೈರ್ ಫೈಝಿ ಅಂಕೋಲ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
25ರಂದು ಮಗ್ರಿಬ್ ನಮಾಝ್‌ನ ಬಳಿಕ ಸ್ವಲಾತ್ ವಾರ್ಷಿಕೋತ್ಸವದ ನೇತೃತ್ವ ಹಾಗೂ ಆಶೀರ್ವಚವನ್ನು ಅಸ್ಸಯ್ಯದ್ ಫಕ್ರುದ್ದೀನ್ ಅಲ್ ಅಹ್ಸನಿ ತಂಙಳ್ ತಾನೂರು ನೆರವೇರಿಸುವರು. ಮುಖ್ಯ ಪ್ರಭಾಷಣವನ್ನು ಮೇಲ್ಪರಂಬು ಕೇಂದ್ರ ಜುಮ್ಮಾ ಮಸೀದಿಯ ಖತೀಬ್ ಅಶ್ರಫ್ ರಹ್ಮಾನಿ ಚೌಕಿ ನೀಡಲಿದ್ದಾರೆ.
ಫೆ. 26ರಂದು ಮಡ್ಲಿಸುನ್ನೂರು ವಾರ್ಷಿಕದ ನೇತೃತ್ವ ಹಾಗೂ ಮುಖ್ಯ ಪ್ರಭಾಷಣವನ್ನು ಬಿ.ಕೆ. ಅಬ್ದುಲ್ ಖಾದರ್ ಮುಸ್ಲಿಯಾರ್ ಬಾಂಬ್ರಾಣ ಮಾಡಲಿದ್ದಾರೆ. ಮಳಲಿ ಜುಮ್ಮಾ ಮಸೀದಿ ಖತೀಬ್ ಝುಬೇರ್ ಫೈಝಿ ಅಂಕೋಲ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಫೆ. 27ರಂದು ಮಗ್ರಿಬ್ ನಮಾಝ್‌ನ ಬಳಿಕ ಉರೂಸ್ ಸಮಾರಂಭದ ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷ ಮಾಮು ಮಣೇಳ್ ವಹಿಸಲಿದ್ದಾರೆ. ದುವಾ ನೇತೃತ್ವವನ್ನು ಶೈಖುನಾ ಅಲ್ ಹಾಜಿ ಅಝ್ಝರ್ ಫೈಝಿ ನೆರವೇರಿಸುವರು. ಮುಖ್ಯ ಮತಪ್ರಭಾಣವನ್ನು ಸ್ವಾಲಿಹ್ ಬತ್ತೇರಿ ಮಾಡಲಿದ್ದಾರೆ. ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಅವರು ಹೇಳಿದರು.
ಮಳಲಿ ಮಸೀದಿ ಪುನರ್ ನಿರ್ಮಾಣ ಸಮಿತಿ ಕಾರ್ಯದರ್ಶಿ ಸರ್ಫ್‌ರಾಜ್, ಮಳಲಿ ಜುಮ್ಮಾ ಮಸೀದಿ ಕೋಶಾಧಿಕಾರಿ ಎಂ.ಅಬ್ದುಲ್ ರಜಾಕ್, ಸದಸ್ಯರಾದ ಅಬ್ದುಲ್ ಅಝೀಝ್, ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.







