ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು
ಕೋಟ, ಫೆ.24: ಕೋಟ ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರದ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿ ರುವ ಘಟನೆ ನಡೆದಿದೆ.
ಕೆ.ಗಿರೀಶ ನಾಯಕ್ ಎಂಬವರು ತನ್ನ ಹೆಂಡತಿ ಮತ್ತು ಮಗನೊಂದಿಗೆ ಫೆ.20ರಂದು ಬೆಳಗ್ಗೆ ಕಾರ್ಕಳದಲ್ಲಿನ ಗೃಹ ಪ್ರವೇಶಕ್ಕೆ ಹೋಗಿದ್ದು ಸಂಜೆ ಮನೆಗೆ ವಾಪಸು ಬಂದು, ಫೆ.23ರಂದು ಮಧ್ಯಾಹ್ನ ಮನೆಯ ಗೋದ್ರೇಜ್ ಕಾಪಾಟು ತೆಗೆದು ನೋಡಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಕಪಾಟಿನಲ್ಲಿದ್ದ ಒಟ್ಟು 12 ಪವನ್ ತೂಕದ ಬೆಂಡೋಲೆ, ಚಕ್ರ ಸರ, ರೇಡಿಯೋ ಚೈನ್, ಉಂಗುರಗಳು, ಬೆಳ್ಳಿಯ ಕಾಲು ದೀಪ, ಬೆಳ್ಳಿಯ ಕಾಲು ಉಂಗುರ, ಬೆಳ್ಳಿಯ ಸೊಂಟದ ದಾರಗಳನ್ನು ಕಳ್ಳರು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 5,00,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story