Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಬಿಜೆಪಿಗೆ 'ಗೋವಾದಲ್ಲಿ ಗೋ...

ಬಿಜೆಪಿಗೆ 'ಗೋವಾದಲ್ಲಿ ಗೋ ಖಾತಾ'-'ಕರ್ನಾಟಕದಲ್ಲಿ ಗೋ ಮಾತಾ': ಕಾಂಗ್ರೆಸ್ ಟೀಕೆ

ವಾರ್ತಾಭಾರತಿವಾರ್ತಾಭಾರತಿ25 Feb 2021 9:06 PM IST
share
ಬಿಜೆಪಿಗೆ ಗೋವಾದಲ್ಲಿ ಗೋ ಖಾತಾ-ಕರ್ನಾಟಕದಲ್ಲಿ ಗೋ ಮಾತಾ: ಕಾಂಗ್ರೆಸ್ ಟೀಕೆ

ಬೆಂಗಳೂರು, ಫೆ.25: ದೇಶದ ವೈವಿಧ್ಯತೆಗಳ ಬಗ್ಗೆ ಅರಿವಿಲ್ಲದ ಇತ್ತೀಚಿಗೆ ಜನ್ಮತಳೆದ ಎಳೆ ಕೂಸು ರಾಜ್ಯ ಬಿಜೆಪಿ. ವಿವಿಧತೆಯಲ್ಲಿ ಏಕತೆ ಈ ದೇಶದ ಜೀವಸತ್ವ. ಭಾರತದ ಸಂಸ್ಕೃತಿ, ಭಾಷೆ, ಆಹಾರ, ರಾಜಕೀಯ ಎಲ್ಲವೂ ಆಯಾ ಪ್ರದೇಶಗಳಲ್ಲಿ ಭಿನ್ನವಾಗಿರುತ್ತವೆ. ‘ಗೋವಾದಲ್ಲಿ ಗೋ ಖಾತಾ’ ‘ಕರ್ನಾಟಕದಲ್ಲಿ ಗೋಮಾತಾ’ ನಿಮ್ಮದೇ ರಾಜಕೀಯ ನಿಲುವು ಭಿನ್ನವಿದೆಯಲ್ಲ ಏಕೆ? ಎಂದು ರಾಜ್ಯ ಕಾಂಗ್ರೆಸ್ ಟ್ವೀಟರ್‍ನಲ್ಲಿ ಪ್ರಶ್ನಿಸಿದೆ.

ಕೇಂದ್ರ ಸರಕಾರ ಹಾಗೂ ರಾಜ್ಯ ಬಿಜೆಪಿ ಸರಕಾರದ ನಿಲುವುಗಳ ವಿರುದ್ಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಕಾಂಗ್ರೆಸ್, ಒಂದೇ ತಿಂಗಳಲ್ಲಿ ಮೂರು ಬಾರಿ ಎಲ್‍ಪಿಜಿ ಗ್ಯಾಸ್ ದರ ಏರಿಕೆ. (25 ರೂ., 50 ರೂ., 25 ರೂ.) ಪ್ರಸ್ತುತ ಸಿಲಿಂಡರ್ ಒಂದರ ಬೆಲೆ 800 ರೂ. ರಾಜ್ಯ ಬಿಜೆಪಿ ನಿಮಗೇನೋ ಸಗಣಿ, ಗಂಜಲವಿದೆ. ಜನಸಾಮಾನ್ಯರು ಹೊಟ್ಟೆಗೇನು ತಿನ್ನಬೇಕು ಹೇಳಿ? ‘ಬಿಜೆಪಿ ಸಹವಾಸ, ಮೂರು ಹೊತ್ತೂ ಉಪವಾಸ’ ಎಂದು ಟೀಕಿಸಿದೆ.

ಜನಸಾಮಾನ್ಯರ ಬದುಕನ್ನು ‘ಬ್ರೇಕ್’ ಮಾಡುವ ಇಂದಿನ ‘ಬ್ರೇಕಿಂಗ್ ನ್ಯೂಸ್’. ಲೋಕಲ್ ಪ್ಯಾಸೆಂಜರ್ ರೈಲ್ವೆ ದರ ಏರಿಕೆ. ಬಿಎಂಟಿಸಿ ಬಸ್ ದರ ಏರಿಕೆಗೆ ಪ್ರಸ್ತಾವನೆ. ಎಲ್‍ಪಿಜಿ ಸಿಲಿಂಡರ್ 25ರೂ ಏರಿಕೆ. ಇಂದಿನ ಪೆಟ್ರೋಲ್ ದರ 93.98 ರೂಪಾಯಿ. ಈಗಾಗಲೇ ಕಂಗೆಟ್ಟಿರುವ ಜನತೆಯ ಮನದಾಳದ ಮಾತು. ‘ಬಿಜೆಪಿ ಸಹವಾಸ ಮೂರು ಹೊತ್ತೂ ಉಪವಾಸ’ ಎಂದು ಕಾಂಗ್ರೆಸ್ ದೂರಿದೆ.

ಸಾಧನೆಗಳಿಲ್ಲದಿದ್ದರೂ ಯೋಜನೆಗಳ ಹೆಸರು ಬದಲಿಸಿ ಇತಿಹಾಸ ಪುಸ್ತಕದಲ್ಲಿ ಸೇರುವ ಯತ್ನ ಬಿಜೆಪಿ ಮತ್ತು ನರೇಂದ್ರ ಮೋದಿ ಅವರದ್ದು. ಪುಕ್ಕ ಕೆದರಿಕೊಂಡರೆ ಕಾಗೆ ನವಿಲಾಗುವುದಿಲ್ಲ. ಹೆಸರು ಬದಲಿಸಿದರೆ ತುಕ್ಕಿನ ಮನುಷ್ಯ ಉಕ್ಕಿನ ಮನುಷ್ಯನಾಗುವುದಿಲ್ಲ. ಸರ್ದಾರ್ ಪಟೇಲ್ ಸ್ಟೇಡಿಯಂ ಹೆಸರಿದ್ದಿದ್ದು ಮರೆತಿದ್ದರೆ ನೋಡಿಕೊಳ್ಳಿ ರಾಜ್ಯ ಬಿಜೆಪಿ ಎಂದು ಕಾಂಗ್ರೆಸ್ ತಿಳಿಸಿದೆ.

ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷಕ್ಕೆ ಸರ್ದಾರ್ ಪಟೇಲರ ಬಗ್ಗೆ ಇದ್ದದ್ದು ನಕಲಿ ಪ್ರೇಮ ಎನ್ನುವುದು ಸಾಬೀತಾಗಿದೆ. ದೇಶ ಕಟ್ಟುವಲ್ಲಿ ತಮ್ಮವರ ಪಾತ್ರವಿಲ್ಲದ ಕಾರಣ ನೆಹರುರವರ ಖ್ಯಾತಿ ಕುಗ್ಗಿಸಲು ಪಟೇಲರ ಹೆಸರನ್ನು "ಆಪರೇಷನ್ ಕಮಲ" ಮಾಡಿದ್ದರು. ಹೆಸರು ಬದಲಿಸಿದಾಕ್ಷಣ ತುಕ್ಕಿನ ಮನುಷ್ಯ, ಉಕ್ಕಿನ ಮನುಷ್ಯನಾಗಲಾರ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಕೇಶುಭಾಯ್ ಪಟೇಲ್‍ರನ್ನು ಮುಗಿಸಿದ್ದಾಯ್ತು. ಅಡ್ವಾಣಿಯವರನ್ನ ಮೂಲೆಗೆ ಕೂರಿಸಿದ್ದಾಯಿತು. ವಾಜಪೇಯಿ ಅವರ ಫೋಟೋ ಕೂಡ ಇಡದೆ ಬದಿಗೆ ಸರಿಸಿದ್ದಾಯ್ತು. ಈಗ ಸ್ಟೇಡಿಯಂಗೆ "ಉಕ್ಕಿನ ಮನುಷ್ಯ" ಹೆಸರನ್ನೇ ಬದಲಿಸಿ "ತುಕ್ಕಿನ ಮನುಷ್ಯ" ತನ್ನ ಹೆಸರಿಟ್ಟಿದ್ದಾರೆ. ರಾಜ್ಯ ಬಿಜೆಪಿ ತಾನು ಪಟೇಲರಿಗಿಂತ ಮಹಾನ್ ಎಂದುಕೊಂಡಿದ್ದಾರಾ ನರೇಂದ್ರ ಮೋದಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ದೇಶ ಮೋದಿಯ ಸ್ಟೇಡಿಯಂ. ಈ ಎಂಡ್‍ನಲ್ಲಿ ಅಂಬಾನಿ, ಆ ಎಂಡ್‍ನಲ್ಲಿ ಅದಾನಿ. ಸೆಂಟ್ರಲ್ಲಿ ಬಿಜೆಪಿ/ಇಂಡಿಯಾ ಮ್ಯಾಚು. ಬೆಲೆ ಏರಿಕೆ ಬ್ಯಾಟಿಂಗ್, ಫ್ಯಾಶಿಸಂ ಕೀಪಿಂಗ್, ದ್ವೇಷದ ಬೌಲಿಂಗ್, ಕೋಮುವಾದದ ಫೀಲ್ಡಿಂಗ್, ಸುಳ್ಳುಗಳ ಸ್ಪಿನ್‍ಗಳು, ಪೆಟ್ರೋಲ್ ಸೆಂಚುರಿ, ಆರ್ಥಿಕತೆ ಡಕ್ ಔಟ್, ಡೆಮಾಕ್ರಸಿ ಬೋಲ್ಡ್ ಔಟ್, ಸೌಹಾರ್ದತೆ ಕ್ಯಾಚ್ ಔಟ್, ಜನರ ಬದುಕು ಸ್ಟಂಪ್ ಔಟ್ ಎಂದು ಕಾಂಗ್ರೆಸ್ ದೂರಿದೆ.

ದೇಶದ ವೈವಿಧ್ಯತೆಗಳ ಬಗ್ಗೆ ಅರಿವಿಲ್ಲದ ಇತ್ತೀಚಿಗೆ ಜನ್ಮತಳೆದ ಎಳೆ ಕೂಸು @BJP4Karnataka

ವಿವಿಧತೆಯಲ್ಲಿ ಏಕತೆ ಈ ದೇಶದ ಜೀವಸತ್ವ.
ಭಾರತದ ಸಂಸ್ಕೃತಿ, ಬಾಷೆ, ಆಹಾರ,ರಾಜಕೀಯ ಎಲ್ಲವೂ ಆಯಾ ಪ್ರದೇಶಗಳಲ್ಲಿ ಭಿನ್ನವಾಗಿರುತ್ತವೆ.

"ಗೋವಾದಲ್ಲಿ ಗೋ ಖಾತಾ"
"ಕರ್ನಾಟಕದಲ್ಲಿ ಗೋಮಾತಾ"
ನಿಮ್ಮದೇ ರಾಜಕೀಯ ನಿಲುವು ಭಿನ್ನವಿದೆಯಲ್ಲ ಏಕೆ?! https://t.co/xHs4I6StXT

— Karnataka Congress (@INCKarnataka) February 25, 2021

ಜನಸಾಮಾನ್ಯರ ಬದುಕನ್ನು "ಬ್ರೇಕ್" ಮಾಡುವ ಇಂದಿನ "Breaking news"!

ಲೋಕಲ್ ಪ್ಯಾಸೆಂಜರ್ ರೈಲ್ವೆ ದರ ಏರಿಕೆ

ಬಿಎಂಟಿಸಿ ಬಸ್ ದರ ಏರಿಕೆಗೆ ಪ್ರಸ್ತಾವನೆ

ಎಲ್‌ಪಿಜಿ ಸಿಲಿಂಡರ್ 25ರೂ ಏರಿಕೆ

ಇಂದಿನ ಪೆಟ್ರೋಲ್ ದರ 93.98 ರೂಪಾಯಿ

ಈಗಾಗಲೇ ಕಂಗೆಟ್ಟಿರುವ ಜನತೆಯ ಮನದಾಳದ ಮಾತು

"ಬಿಜೆಪಿ ಸಹವಾಸ ಮೂರು ಹೊತ್ತೂ ಉಪವಾಸ"

— Karnataka Congress (@INCKarnataka) February 25, 2021

ಸಾಧನೆಗಳಿಲ್ಲದಿದ್ದರೂ ಯೋಜನೆಗಳ ಹೆಸರು ಬದಲಿಸಿ ಇತಿಹಾಸ ಪುಸ್ತಕದಲ್ಲಿ ಸೇರುವ ಯತ್ನ @BJP4India & @narendramodi ಅವರದ್ದು.

ಪುಕ್ಕ ಕೆದರಿಕೊಂಡರೆ ಕಾಗೆ ನವಿಲಾಗುವುದಿಲ್ಲ!
ಹೆಸರು ಬದಲಿಸಿದರೆ ತುಕ್ಕಿನ ಮನುಷ್ಯ ಉಕ್ಕಿನ ಮನುಷ್ಯನಾಗುವುದಿಲ್ಲ!

ಸರ್ದಾರ್ ಪಟೇಲ್ ಸ್ಟೇಡಿಯಂ ಹೆಸರಿದ್ದಿದ್ದು ಮರೆತಿದ್ದರೆ ನೋಡಿಕೊಳ್ಳಿ@BJP4Karnataka https://t.co/gDln1Ojqgf pic.twitter.com/ea6O0PnjfI

— Karnataka Congress (@INCKarnataka) February 25, 2021

ಒಂದೇ ತಿಂಗಳಲ್ಲಿ ಮೂರು ಬಾರಿ ಎಲ್‌ಪಿಜಿ ಗ್ಯಾಸ್ ದರ ಏರಿಕೆ.

25₹
50₹
25₹
ಪ್ರಸ್ತುತ ಸಿಲಿಂಡರ್ ಒಂದರ ಬೆಲೆ 800₹@BJP4Karnataka ನಿಮಗೇನೋ ಸಗಣಿ, ಗಂಜಲವಿದೆ!
ಜನಸಾಮಾನ್ಯರು ಹೊಟ್ಟೆಗೇನು ತಿನ್ನಬೇಕು ಹೇಳಿ?

"ಬಿಜೆಪಿ ಸಹವಾಸ, ಮೂರು ಹೊತ್ತೂ ಉಪವಾಸ"

— Karnataka Congress (@INCKarnataka) February 25, 2021

'@BJP4Karnataka ಬೇಕೂಫಗಳಾ!
ತಾಕತ್ತಿದ್ದರೆ ಸ್ಟೇಡಿಯಂಗೆ ಮೊದಲು ಯಾವ ಹೆಸರಿತ್ತು ಹೇಳಿ?

ಸ್ಟೇಡಿಯಂ ಮೊದಲು ಉಕ್ಕಿನ ಮನುಷ್ಯನ ಹೆಸರಿನಲ್ಲಿತ್ತಲ್ಲವೇ?

ಅದನ್ನೇಕೆ ಬದಲಿಸಿ ತುಕ್ಕಿನ ಮನುಷ್ಯನ ಹೆಸರಿಟ್ಟಿದ್ದು?

ಇತಿಹಾಸವನ್ನು ತಿರುಚುವುದು, ಹೆಸರನ್ನ ಬದಲಿಸುವುದೇ ನಿಮ್ಮ ತುಚ್ಛ ಮನಸಿನ, ನೀಚ ವ್ಯಕ್ತಿತ್ವದ @narendramodi ಕೆಲಸವಾಗಿದೆ. https://t.co/HqM36YVPhJ

— Karnataka Congress (@INCKarnataka) February 25, 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X