ಮಂಗಳೂರು ವಿ.ವಿ.: ಪಿ.ಎಚ್.ಡಿ ನಿಯಮಗಳ ಪರಿಷ್ಕರಣೆ
ಮಂಗಳೂರು, ಫೆ. 25: ಮಂಗಳೂರು ವಿಶ್ವವಿದ್ಯಾನಿಲಯದ 2021ನೆ ಸಾಲಿನಲ್ಲಿ ಪರಿಷ್ಕೃತ ಪಿಎಚ್ ಡಿ ನಿಯಮಗಳಿಗೆ ಶೈಕ್ಷಣಿಕ ಮಂಡಳಿ ಅನುಮೋದನೆ ನೀಡಿತು.
ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಎಡಪಡಿತ್ತಾಯ ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಆಡಳಿತ ಸೌಧ ರಾಣಿ ಅಬ್ಬಕ್ಕ ಸಭಾಂಗಣದಲ್ಲಿಂದು ನಡೆದ ವಿಶ್ವ ವಿದ್ಯಾಲಯದ ಶೈಕ್ಷಣಿಕ ಮಂಡಳಿಯ 2020-21 ಸಾಲಿನ ತ್ರತೀಯ ಸಾಮಾನ್ಯ ಸಭೆ ನಡೆಯಿತು.
ನೂತನ ಪಿಎಚ್ ಡಿ ನಿಯಮಾವಳಿ ಪ್ರಕಾರ 2021 ನೆ ಸಾಲಿನಿಂದ ಎಲ್ಲಾ ಖಾಲಿ ಸೀಟುಗಳನ್ನು ಪ್ರಥಮ ಬಾರಿಗೆ ಹೊಸದಾಗಿ ಪರಿಗಣಿಸಲು ನಿರ್ಧರಿಸಿದೆ. ಐದು ವರ್ಷಗಳ ಪಿಎಚ್ ಡಿ ಅವಧಿಯನ್ನು ಬ್ಲಾಕ್ ಅವಧಿಯೆಂದು ಪರಿಗಣಿಸಲು ನಿರ್ಧರಿಸಿದೆ.ಪೂರ್ಣ ಕಾಲಿಕ ನೆಲೆಯ ವಿದ್ಯಾರ್ಥಿಗಳಿಗೆ 3+2 ವರ್ಷ ಹಾಗೂ ಅಂಶಕಾಲಿಕ ನೆಲೆಯ ವಿದ್ಯಾರ್ಥಿ ಗಳಿಗೆ 4+2 ವರ್ಷ ಗಳ ಗರಿಷ್ಠ ಅವಧಿ ಯನ್ನು ಪಿಎಚ್ ಡಿ ಪೂರ್ಣ ಗೊಳಿಸಲು ನಿಗದಿಪಡಿಸಲಾಗಿದೆ. ಪ್ರತಿ ವರ್ಷ ಪಿಎಚ್ ಡಿ ಕಾರ್ಯಕ್ರಮ ಕ್ಕೆ ನೊಂದಣಿಯಾದ ಬಳಿಕ ಎಲ್ಲಾ ವಿಭಾಗಗಳ ಮಾರ್ಗದರ್ಶಕರ ಮತ್ತು ವಿದ್ಯಾರ್ಥಿಗಳೊಂದಿಗೆ ಕುಲಪತಿಗಳ ಅಧ್ಯಕ್ಷ ತೆಯಲ್ಲಿ ಕುಲಸಚಿವರೊಂದಿಗೆ ಪ್ರತಿ ವರ್ಷ ಸಭೆ ನಡೆಯಲಿದೆ. ಖಾಲಿ ಇರುವ ಸೀಟುಗಳನ್ನು ಸರಕಾರದ ನಿರ್ದೇಶನದಂತೆ ಮೀಸಲಾತಿ ಪ್ರಕಾರ ಹಂಚಲಾಗುವುದು ಎಂದು ಕುಲಪತಿ ಪಿ.ಎಸ್.ಎಡಪಡಿತ್ತಾಯ ತಿಳಿಸಿದ್ದಾರೆ.
ಪದವಿ ತರಗತಿಗಳ ಎಲ್ಲಾ ಪಠ್ಯ ಕ್ರಮಗಳ ಜೊತೆಗೆ ಕಲಿಕೆಯ ಉದ್ದೇಶ ವನ್ನು ಮತ್ತು ಕಲಿಕೆಯ ಪಲಿತಾಂಶವನ್ನು ಸ್ಪಷ್ಟ ಪಡಿ ಸುವ ಅಂಶಗಳನ್ನು ಪಠ್ಯ ಕ್ರಮದ ಜೊತೆ ಸೇರಿಸ ಬೇಕು ಎಂಬ ಗೊತ್ತುವಳಿ ಯನ್ನು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಮತ್ತು ಶೈಕ್ಷಣಿಕ ಮಂಡಳಿಯ ಸದಸ್ಯ ಡಾ.ಬಿ.ಎಸ್. ಅಪ್ಪಾಜಿ ಗೌಡ ಮಂಡಿಸಿದರು.ಶೈಕ್ಷಣಿಕ ಮಂಡಳಿ ಸಭೆ ಈ ಗೊತ್ತುವಳಿ ಗೆ ಅನುಮೋದನೆ ನೀಡುವುದಾಗಿ ಕುಲಪತಿ ಪ್ರೊ.ಪಿ.ಎಸ್.ಎಡಪಡಿತ್ತಾಯ ತಿಳಿಸಿದ್ದಾರೆ.
ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಆರಂಭಿಸಲಾಗಿರುವ ಭೂಗೋಳ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮತ್ತು ಸ್ನಾತಕೋತ್ತರ ವೈದ್ಯಕೀಯ ಭೌತಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಕರಡು ಪರಿನಿಯ ಮ ವನ್ನು ಅನುಮೋದಿಸಲಾಯಿತು.
ಕೋವಿಡ್ ಹಿನ್ನೆಲೆಯಲ್ಲಿ 2019-20 ಸಾಲಿನ ದೂರ ಶಿಕ್ಷಣ ಕೇಂದ್ರ ಪ್ರಥಮ ಬಿಎಡ್ (ಒಡಿಎಲ್)ಪದವಿ ವಿದ್ಯಾರ್ಥಿ ಗಳಿಗೆ 30 ದಿನಗಳ ಸಂಪರ್ಕ ಕಾರ್ಯಕ್ರಮ ವನ್ನು 15 ದಿನಗಳಿಗೆ ಕಡಿತ ಗೊಳಿಸಿ ಭೌತಿಕ ತರಗತಿ ನಡೆಸಲು ಸಭೆ ಅನುಮೋದನೆ ನೀಡಿತು. ಇದೇ ಸಂದರ್ಭ ಮಂಗಳೂರು ವಿ.ವಿ.ಯ 2012-13,2018-19 ವರೆಗಿನ ಮಹಾಲೇಖಪಾಲರ ಲೆಕ್ಕ ಪರಿಶೋಧನಾ ವರದಿಯ ಅನುಸರಣಾ ವರದಿಗೆ ಅನು ಮೋದನೆ ನೀಡಲಾಯಿತು. ಮತ್ತು 2016-17 ಲೆಕ್ಕ ಪರಿಶೋಧನಾ ವರದಿ, ಅನುಸರಣಾ ವರದಿ, 2019-20ನೆ ಸಾಲಿನ ವಾರ್ಷಿಕ ಲೆಕ್ಕಪತ್ರಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಕುಲಸಚಿವ (ಆಡಳಿತ) ರಾಜು ಮೊಗವೀರ, ಕುಲಸಚಿವ(ಪರೀಕ್ಷಾಂಗ)ಪಿ.ಎಲ್.ಧರ್ಮ, ಹಣಕಾಸು ಅಧಿಕಾರಿ ನಾರಾಯಣ ಮೊದಲಾದವರು ಉಪ ಸ್ಥಿತರಿದ್ದರು.







