ಸಹಕಾರಿ ಧುರೀಣನಿಗೆ ಜೀವ ಬೆದರಿಕೆ ಪ್ರಕರಣ : ಉಡುಪಿ ಜಿಲ್ಲಾ ಕಾಂಗ್ರೆಸ್‌ನಿಂದ ಖಂಡನೆ
ಉಡುಪಿ, ಫೆ.26: ಉಪ್ಪೂರು ಸೊಸೈಟಿಯ ಅಧ್ಯಕ್ಷ ಮತ್ತು ಹಾವಂಜೆ ಗ್ರಾಮ ಪಂಚಾಯತ್‌ನ ಸದಸ್ಯರಾದ ರಮೇಶ್ ಎನ್. ಶೆಟ್ಟಿ ಕುಕ್ಕೆಹಳ್ಳಿ ಇವರು ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಬಡವರ ಧ್ವನಿಯಾಗಿ ಕೆಲಸ ಮಾಡುವ ನಿಷ್ಟಾವಂತ ರಾಜಕಾರಣಿ. ಇವರ ರಾಜಕೀಯ ವಿರೋಧಿಗಳು, ಹಾವಂಜೆ ಮತ್ತು ಕುಕ್ಕೆಹಳ್ಳಿ ಗ್ರಾಪಂ ಚುನಾವಣೆಯ ದ್ವೇಷದಿಂದ ಅವರ ಮನೆಗೆ ರಾತ್ರಿ ಹೊತ್ತಲ್ಲಿ ನುಗ್ಗಿ ದಾಂಧಲೆ ಮಾಡಿರುವುದು, ಅಲ್ಲದೆ ಮನೆಯ ಗೇಟಿನ ಲೈಟ್‌ಗಳನ್ನು ಒಡೆದು ಹಾಕಿ ಜೀವ ಬೆದರಿಕೆಯನ್ನು ಒಡ್ಡಿರುವುದು ರಾಜಕೀಯ ಪ್ರೇರಿತ ವಾಗಿದ್ದು ಇದು ಖಂಡನೀಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.
ಈ ಬಗ್ಗೆ ಈಗಾಗಲೇ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಜೀವ ಬೆದರಿಕೆ ಒಡ್ಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಕೊಡವೂರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
Next Story





