ಹೊಟೇಲ್ ಮೋತಿಮಹಲ್ನಲ್ಲಿ ರೆಡಿಮೇಡ್ ಗಾರ್ಮೆಂಟ್ ಮೇಳ: ಗ್ರಾಹಕರ ಮನವಿಯ ಮೇರೆಗೆ ಮಾ. 2ರವರೆಗೆ ಮುಂದುವರಿಕೆ
ಮಂಗಳೂರು, ಫೆ.26: ನಗರದ ಹೊಟೇಲ್ ಮೋತಿ ಮಹಲ್ನಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್ 7,000 ಚದರ ಅಡಿಯ ಒಂದೇ ಬೃಹತ್ ಸಭಾಂಗಣದಲ್ಲಿ ಅತಿದೊಡ್ಡ ರಿಯಾಯಿತಿ ಮಾರಾಟ ಮೇಳವು ಅದ್ದೂರಿಯಾಗಿ ಆರಂಭಗೊಂಡಿದ್ದು, ಮಾ.2ರವರೆಗೆ ನಡೆಯಲಿದೆ.
ಕಳೆದ ವರ್ಷದ ದಸರಾ, ದೀಪಾವಳಿ ಮತ್ತು ಹೊಸ ವರ್ಷದ ಸಲುವಾಗಿ ಫ್ಯಾಕ್ಟರಿಯಿಂದ ನೇರವಾಗಿ ಖರೀದಿಸಿದ ಹೊಸ ಸ್ಟಾಕ್ ಕೊರೋನ ಹಾವಳಿಯಿಂದಾಗಿ ಮಾರಾಟವಾಗದೇ ಗೋದಾಮಿನಲ್ಲಿ ಉಳಿದಿದ್ದವು. ಈ ಬೃಹತ್ ಪ್ರಮಾಣದ ಲೇಡಿಸ್, ಜೆಂಟ್ಸ್, ಮಕ್ಕಳ ಉಡುಪುಗಳನ್ನು ನೇರವಾಗಿ ಮಂಗಳೂರಿನ ಹೊಟೇಲ್ ಮೋತಿಮಹಲ್ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
50 ಸಾವಿರಕ್ಕೂ ಅಧಿಕ ನಮೂನೆಯ ಜೆಂಟ್ಸ್, ಲೇಡಿಸ್, ಕಿಡ್ಸ್ ಪ್ಯಾಂಟ್, ಶರ್ಟ್, ಟೀ ಶರ್ಟ್, ಲೋವೇರ್, ಬರ್ಮುಡಾ, ಟಾಪ್, ಕೇಪ್ರಿ, ಲೇಡಿಸ್ ಪೈಜಾಮ, ಬಾಬಾ ಸೂಟ್, ಕಿಡ್ಸ್ ಡ್ರೆಸ್, ಫ್ಯಾನ್ಸಿ ಸಾರೀ, ಕುರ್ತಿಸ್ ಇತರ ದಿರಿಸುಗಳು ಕೇವಲ 150 ರೂ. ಇಂದ 350 ರೂ. ವರೆಗೆ ದರ ನಿಗದಿಪಡಿಸಲಾಗಿದೆ.
ಮಲ್ಟಿ ಬ್ರಾಂಡೆಂಡ್ ಗಾರ್ಮೆಂಟ್ಸ್ನ ಎಲ್ಲ ಬಗೆಯ ದಿರಿಸುಗಳು ಕೇವಲ 400 ರೂ.ರಿಂದ 999ರೂ.ವರೆಗೆ ಮಾರಾಟಕ್ಕೆ ಲಭ್ಯ ಇವೆ. 200ರಿಂದ 300 ರೂ.ವರೆಗಿನ ಬ್ರಾಂಡೆಡ್ ಬ್ರಾ, ಪ್ಯಾಂಟೀಸ್ ಕೇವಲ 50 ರೂ.ನಲ್ಲಿ ಸಿಗಲಿವೆ.
ಗ್ರಾಹಕರ ಬೇಡಿಕೆಯ ಮೇರೆಗೆ ಸಂಸ್ಥೆಯ ಪ್ರವರ್ತಕರು ಮೇಳವನ್ನು ಮಾ.2ರವರೆಗೆ ಮುಂದುವರಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಗ್ರಾಹಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಉಡುಪುಗಳ ಖರೀದಿಯ ಭರಾಟೆಯಲ್ಲಿ ತೊಡಗಿದ್ದಾರೆ. ಕೋವಿಡ್ 19 ನಿಯಮಾವಳಿಯನ್ನು ಅನುಸರಿಸಿಯೇ ಉಡುಪುಗಳ ಖರೀದಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗಾಗಿ ಗ್ರಾಹಕರು ನಿರಾತಂಕವಾಗಿ ಈ ಮೇಳದ ಪ್ರಯೋಜನ ಪಡೆಯ ಬಹುದು ಎಂದು ಪ್ರಕಟನೆ ತಿಳಿಸಿದೆ.