ವಿಜಯ್ ಹಝಾರೆ ಪಂದ್ಯವನ್ನಾಡಿದ ಶಮಿ ಸಹೋದರ

ಹೊಸದಿಲ್ಲಿ,: ವಿಜಯ್ ಹಝಾರೆ ಟ್ರೋಫಿ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ತನ್ನ ಸಹೋದರ ಮುಹಮ್ಮದ್ ಕೈಫ್ ಅವರನ್ನು ಭಾರತದ ಕ್ರಿಕೆಟ್ ತಂಡದ ವೇಗಿ ಮುಹಮ್ಮದ್ ಶಮಿ ಶನಿವಾರ ಅಭಿನಂದಿಸಿದ್ದಾರೆ.
ಕೋಲ್ಕತಾದಲ್ಲಿ ಶನಿವಾರ ನಡೆದ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಕೈಫ್ ಬಂಗಾಳ ಪರ ಪಾದಾರ್ಪಣೆ ಮಾಡಿದರು.
‘‘ವಿಜಯ್ ಹಝಾರೆ ಟ್ರೋಫಿ ಚೊಚ್ಚಲ ಪಂದ್ಯದಲ್ಲಿ ಆಡಿರುವ ನನ್ನ ಸಹೋದರನಿಗೆ ಅಭಿನಂದನೆಗಳು. ನಾವು ಈ ಕ್ಷಣಕ್ಕಾಗಿ ಕಾಯುತ್ತಿದ್ದೇವೆ. ನೀವು ಅಂತಿಮ ಕನಸಿಗೆ ಒಂದು ಹೆಜ್ಜೆ ಹತ್ತಿರದಲ್ಲಿದ್ದೀರಿ. ಕಠಿಣ ಶ್ರಮವಹಿಸಿರಿ’’ಎಂದು ಶಮಿ ಟ್ವೀಟ್ ಮಾಡಿದ್ದಾರೆ.
ಕೈಫ್ ಬಂಗಾಳದ ಹಿರಿಯ ತಂಡವನ್ನು ಪ್ರತಿನಿಧಿಸುವ ಮೊದಲು ಕೆಲವು ಕ್ಲಬ್ ಪರ ಪಂದ್ಯಗಳನ್ನು ಆಡಿದ್ದರು. ಈ ವರ್ಷದ ಜನವರಿಯಲ್ಲಿ ಸಯ್ಯದ್ ಮುಷ್ತಾಕ್ ಟ್ರೋಫಿಗೆ ಬಂಗಾಳದ ತಂಡದಲ್ಲಿಯೂ ಅವರು ಸ್ಥಾನ ಪಡೆದಿದ್ದರು.
24ರ ಹರೆಯದ ಕೈಫ್‌ಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಮಧ್ಯಮವೇಗಿ ಕೈಫ್ ಅವರು 8 ಓವರ್‌ಗಳ ಬೌಲಿಂಗ್ ನಡೆಸಿ 60 ರನ್ ನೀಡಿದರೂವಿಕೆಟ್ ದೊರೆಯಲಿಲ್ಲ. ಈ ಪಂದ್ಯದಲ್ಲಿ ಬಂಗಾಳ ತಂಡ 82 ರನ್‌ಗಳ ಜಯ ಗಳಿಸಿತು.
2020ರ ಡಿಸೆಂಬರ್‌ನಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಕೈಗೆ ಗಾಯ ಮಾಡಿಕೊಂಡಿದ್ದ ಶಮಿ ಚೇತರಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿಯನ್ನು ತಪ್ಪಿಸಿಕೊಂಡರು. ಅವರಿಗೆ ಟ್ವೆಂಟಿ-20 ಸರಣಿಗೆ ವಿಶ್ರಾಂತಿನೀಡಲಾಗಿದೆ.







