ಉಡುಪಿ: ಮನೆಗೆ ನುಗ್ಗಿ ನಗನಗದು ಕಳವು
ಉಡುಪಿ, ಫೆ.28: ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪ ಹತ್ತಿರದ ಮನೆಯೊಂದಕ್ಕೆ ಫೆ.27ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಡಾ.ಶ್ರೀಕಾಂತ್ ಎಂಬವರ ಸ್ವಂತ ಕೆಲಸದ ನಿಮಿತ್ತ ಕೇರಳಕ್ಕೆ ಸಂಸಾರದೊಂದಿಗೆ ಹೋಗಿದ್ದು, ಈ ವೇಳೆ ಮನೆಯ ಮಹಡಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಬೆಡ್‌ರೂಮ್‌ನಲ್ಲಿರುವ ಗೋದ್ರೇಜ್ ಕಾಪಾಟಿನಲ್ಲಿ ಇಟ್ಟಿದ್ದ 1,20,000ರೂ. ಸುಮಾರು 4 ಪವನ್ ಚಿನ್ನದ ಸರ ಹಾಗೂ 20,000ರೂ. ನಗದು ಕಳವು ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





