ಬೆಟ್ಟಂಪಾಡಿಯಲ್ಲಿ ರಕ್ತದಾನ ಶಿಬಿರ

ಪುತ್ತೂರು: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಬೆಟ್ಟಂಪಾಡಿ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ರವಿವಾರ ಬೆಟ್ಟಂಪಾಡಿ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ, ರಕ್ತದಾನ ಮಹಾದಾನವಾಗಿದ್ದು, ಸದೃಢವಂತ ಎಲ್ಲರೂ ರಕ್ತದಾನ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುವವರನ್ನು ಬದುಕಿಸಲು, ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತರಾಗಿ ದಾನ ಮಾಡಲು ಮುಂದಾಗಬೇಕು. ಜೀವ ಉಳಿಸುವಂತಹ ಮಹತ್ಕಾರ್ಯ ಮಾಡಬೇಕು. ಇಂತಹ ಸಮಾಜಮುಖಿ ಕಾರ್ಯ ಮಾಡುವಂತಹ ಉದ್ದೇಶದಿಂದ ಪಾಪ್ಯುಲರ್ ಫ್ರಂಟ್ ರಾಜ್ಯದ ಪ್ರತೀ ಸ್ಥಳಗಳಲ್ಲಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ವ್ಯಾಪಕವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
ಅಸ್ಸಯ್ಯದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ ಅವರು ಕಾರ್ಯಕ್ರಮದಲ್ಲಿ ದುವಾ ಆಶೀರ್ವಚನಗೈದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪುತ್ತೂರು ಜಿಲ್ಲಾಧ್ಯಕ್ಷರಾದ ಜಾಬೀರ್ ಅರಿಯಡ್ಕ ಅಧ್ಯಕ್ಷತ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯರಾದ ಸಾದಿಕ್ ಅರಿಯಡ್ಕ ಮಾತನಾಡಿ, ರಕ್ತದಾನ ಮಹಾದಾನ. ಯುವ ತರುಣರೇ ತುಂಬಿರುವಂತಹ ಭಾರತೀಯ ಸಮಾಜದಲ್ಲಿ ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬರು ಹಾಗೂ ವಿದ್ಯಾರ್ಥಿ ಸಮೂಹವು ರಕ್ತದಾನ ಮಾಡಬೇಕು ಹಾಗೂ ಸಮಾಜದಲ್ಲಿ ರಕ್ತದಾನದ ಬಗ್ಗೆ ಜಾಗೃತಿಯನ್ನು ಮೂಡಿಸಿಬೇಕು ಎಂದರು.
ಸುಮಾರು 75 ಕ್ಕು ಹೆಚ್ಚು ಸ್ಥಳೀಯ ಯುವಕರು ಹಲವಾರು ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು ರಕ್ತದಾನವನ್ನು ಮಾಡಿದರು.
ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಬೆಟ್ಟಂಪಾಡಿ ಘಟಕವನ್ನು ರಚಿಸಲಾಯಿತು. ಇದರ ಗೌರವಾಧ್ಯಕ್ಷರಾಗಿ ಹಮೀದ್ ಕೊಮ್ಮೆಮ್ಮಾರ್, ಅಧ್ಯಕ್ಷರಾಗಿ ಅಶ್ರಫ್ ಪಾರಾ, ಕಾರ್ಯದರ್ಶಿಯಾಗಿ ಸಿದ್ದೀಕ್ ತಂಬುತ್ತಡ್ಕ , ಉಪಾಧ್ಯಕ್ಷರಾಗಿ ಅಶ್ರಫ್ ಕುಕ್ಕುಪುಣಿ ಮತ್ತು ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಪಾರ್ಪಲ, ಕೋಶಾಧಿಕಾರಿಯಾಗಿ ರಫೀಕ್ ಡಿ.ಎಂ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಝಕರಿಯಾ ಕೊರಿಂಗಿಲ ಸ್ವಾಗತಿಸಿ ವಂದಿಸಿದರು. ಶೌಕತ್ ಅಲಿ ರೆಂಜ ನಿರೂಪಿಸಿದರು.







