Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಬಡವರ ತುರ್ತು ಅಗತ್ಯ ಲಸಿಕೆಯಲ್ಲ, ಆಹಾರ

ಬಡವರ ತುರ್ತು ಅಗತ್ಯ ಲಸಿಕೆಯಲ್ಲ, ಆಹಾರ

ವಾರ್ತಾಭಾರತಿವಾರ್ತಾಭಾರತಿ1 March 2021 12:10 AM IST
share
ಬಡವರ ತುರ್ತು ಅಗತ್ಯ ಲಸಿಕೆಯಲ್ಲ, ಆಹಾರ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಸಂಘರ್ಷ ಪೀಡಿತ ಅಥವಾ ಬಡದೇಶಗಳಲ್ಲಿ ಕೋವಿಡ್ ಲಸಿಕೆಗಳ ಲಭ್ಯತೆಯನ್ನು ಹೆಚ್ಚಿಸಬೇಕು ಎಂಬ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಶುಕ್ರವಾರ ಸರ್ವಾನುಮತದಿಂದ ಅಂಗೀಕರಿಸಿದೆ. ಅಂದರೆ ಕೋವಿಡ್ ಲಸಿಕೆಗಳನ್ನು ಕೇವಲ ಶ್ರೀಮಂತ ರಾಷ್ಟ್ರಗಳಷ್ಟೇ ಆದ್ಯತೆಯಿಂದ ಪಡೆದು ಬಡ ದೇಶಗಳಿಗೆ ದೊರಕದಂತೆ ಮಾಡುವುದನ್ನು ತಡೆಯಬೇಕು ಎನ್ನುವುದು ವಿಶ್ವಸಂಸ್ಥೆಯ ಆಗ್ರಹ. ಮೇಲ್ನೋಟಕ್ಕೆ ವಿಶ್ವಸಂಸ್ಥೆಯ ನಿರ್ಣಯ ಮಾನವೀಯವಾದುದು. ಆದರೆ ಬಡ ದೇಶಗಳು ಈ ಕೊರೋನ ಸಂಕಷ್ಟ ಕಾಲದಲ್ಲಿ ನಿಜಕ್ಕೂ ಆಗ್ರಹಿಸುತ್ತಿರುವುದು ಏನನ್ನು? ವಿಶ್ವಸಂಸ್ಥೆಯೇ ಹೇಳುವಂತೆ ಕೊರೋನದಿಂದಾಗಿ ವಿಶ್ವಾದ್ಯಂತ ಬಡತನ ಹೆಚ್ಚಿದೆ.

ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ. ಹಾಗೆಯೇ, ಕೋಟ್ಯಂತರ ಬಡವರು ಶಿಕ್ಷಣದಿಂದ ಹೊರಗುಳಿದಿದ್ದಾರೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳೂ ಶಿಕ್ಷಣಕ್ಕೆ ಸಂಬಂಧಪಟ್ಟ ಬಜೆಟ್‌ನ್ನು ಗಮನಾರ್ಹವಾಗಿ ಇಳಿಸಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಕ್ಷಯದಂತಹ ಮಾರಣಾಂತಿಕ ರೋಗಗಳು ಬಡ ದೇಶಗಳಲ್ಲಿ ಉಲ್ಬಣಿಸಿವೆ. ಕೊರೋನ ಮಾರಣಾಂತಿಕ ರೋಗವಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ಸದ್ಯಕ್ಕೆ ಯಾವ ಬಡದೇಶಗಳು ಕೊರೋನ ಲಸಿಕೆಗಳಿಗೆ ಬಾಯಿ ಬಡಿದುಕೊಳ್ಳುತ್ತಿಲ್ಲ. ಆಹಾರ, ಶಿಕ್ಷಣ ಮತ್ತು ಇನ್ನಿತರ ಉಲ್ಬಣಗೊಳ್ಳುತ್ತಿರುವ ರೋಗಗಳ ಕುರಿತಂತೆ ಆತಂಕಗೊಂಡಿವೆ. ವಿಶ್ವಸಂಸ್ಥೆ ಈ ನಿಟ್ಟಿನಲ್ಲಿ ಅವರಿಗೆ ತನ್ನ ಸಹಾಯ ಹಸ್ತವನ್ನು ಚಾಚುವುದರ ಬಗ್ಗೆ ಆಸಕ್ತಿವಹಿಸಬೇಕಾಗಿತ್ತು. ಆದರೆ, ಲಸಿಕೆಗಳೇ ಬಡ ದೇಶಗಳ ತಕ್ಷಣದ ಅಗತ್ಯ ಎಂದು ಅದು ಭಾವಿಸಿದೆ.
ವಿಶ್ವಾದ್ಯಂತ ಕೊರೋನ ಇಳಿಮುಖ ಕಂಡದ್ದು ಯಾವುದೇ ಲಸಿಕೆಯಿಂದಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ನಮ್ಮ ದೇಶದಲ್ಲೇ ಲಸಿಕೆ ಕಂಡುಹಿಡಿಯಲಾಗಿದೆಯಾದರೂ, ಅದನ್ನು ಸ್ವೀಕರಿಸುವುದಕ್ಕೆ ಪ್ರಜ್ಞಾವಂತರೇ ಹಿಂದೇಟು ಹಾಕುತ್ತಿದ್ದಾರೆ. ಆರೋಗ್ಯ ಸಿಬ್ಬಂದಿ, ವೈದ್ಯರು ಕೂಡ ಲಸಿಕೆಯ ಕುರಿತಂತೆ ತಮ್ಮ ಆಕ್ಷೇಪ, ಅಸಮಾಧಾನಗಳನ್ನು ವ್ಯಕ್ತಪಡಿಸಿದ್ದಾರೆ. ಲಸಿಕೆ ನೀಡುವಿಕೆಯಲ್ಲಿ ಸರಕಾರ ತನ್ನ ಗುರಿಯನ್ನು ಮುಟ್ಟುವಲ್ಲಿ ವಿಫಲವಾಗಿದೆ. ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ಇನ್ನೂ ಈ ಲಸಿಕೆಯನ್ನು ಸ್ವೀಕರಿಸಲು ಮುಂದೆ ಬಂದಿಲ್ಲ. ಈ ಲಸಿಕೆಗಾಗಿ ಕೋಟ್ಯಂತರ ರೂಪಾಯಿಯನ್ನು ವೆಚ್ಚ ಮಾಡಿರುವ ಸರಕಾರ, ಅದನ್ನು ಜನರ ಮೇಲೆ ಹೇರುವುದಕ್ಕಾಗಿ ಹೊಸದಾಗಿ ಕೊರೋನ ಅಲೆಯ ಭಯವನ್ನು ಮಾಧ್ಯಮಗಳ ಮೂಲಕ ಬಿತ್ತಲು ಮುಂದಾಗಿದೆ. ಲಾಕ್‌ಡೌನ್ ಬೆದರಿಕೆಯನ್ನೂ ಒಡ್ಡುತ್ತಿದೆ. ಆರಂಭದಲ್ಲಿ ‘ಪೌರ ಕಾರ್ಮಿಕರಿಗೆ ಆದ್ಯತೆ’ ಎಂಬ ಘೋಷಣೆಯನ್ನು ಸರಕಾರ ನೀಡಿತು. ಅಂದರೆ, ಮೊದಲು ಪೌರ ಕಾರ್ಮಿಕರಿಗೆ ಲಸಿಕೆಯನ್ನು ನೀಡಿ, ಅದರ ಫಲಿತಾಂಶದ ಆಧಾರದಲ್ಲಿ ಉಳಿದವರಿಗೆ ನೀಡುವ ಯೋಜನೆಯನ್ನು ಹಾಕಿಕೊಂಡಿತ್ತು. ಆದರೆ ಪೌರ ಕಾರ್ಮಿಕರನ್ನು ‘ಪ್ರಯೋಗ ಪಶು’ವಾಗಿಸುವುದರ ವಿರುದ್ಧ ವ್ಯಾಪಕ ಆಕ್ಷೇಪಗಳು ಕೇಳಿ ಬಂದವು. ಇದೀಗ ವಿಶ್ವಸಂಸ್ಥೆಯ ನಿರ್ಣಯವನ್ನು ಅನುಮಾನಿಸುವುದಕ್ಕೂ ಇದೇ ಕಾರಣ.

ಲಸಿಕೆ ಯಶಸ್ವಿಯಾಗಿದೆಯೇ, ಇಲ್ಲವೇ ಎನ್ನುವುದನ್ನು ಬಡದೇಶಗಳ ಮೇಲೆ ಪ್ರಯೋಗ ಮಾಡುವುದಕ್ಕಾಗಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆಯೇ? ಎಂಬ ಶಂಕೆ ತಜ್ಞರನ್ನು ಕಾಡುತ್ತಿದೆ. ಕ್ಷಯ, ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ಚಿಕಿತ್ಸೆ ಸಿಗದೇ ಲಕ್ಷಾಂತರ ಬಡವರು ಸಾಯುತ್ತಿರುವಾಗ, ಕೋವಿಡ್‌ನ ಕುರಿತಂತೆ ಮಾತ್ರ ವಿಶ್ವಸಂಸ್ಥೆಗೆ ಯಾಕೆ ಕಾಳಜಿ? ಎಂಬ ಪ್ರಶ್ನೆಯೂ ಜನರಲ್ಲಿ ಎದ್ದಿದೆೆ. ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಬಹಿರಂಗವಾಗಿಯೇ ಸರಕಾರವನ್ನು ಆಕ್ಷೇಪಿಸುತ್ತಾ ‘‘ನಮಗೆ ಕೊರೋನದ ಭಯವಿಲ್ಲ. ಹಸಿವಿನ ಕುರಿತಂತೆ ಭಯವಿದೆ’’ ಎಂದಿದ್ದರು. ಬಡದೇಶಗಳು ಈಗಲೂ ಕೊರೋನದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಯಾಕೆಂದರೆ ಕೊರೋನಕ್ಕಿಂತ ಹೆಚ್ಚಿನ ಸಾವು ನೋವುಗಳು ಈ ದೇಶದಲ್ಲಿ ಸಂಭವಿಸಿದ್ದು ಹಸಿವಿನ ಕಾರಣದಿಂದ. ಜೊತೆಗೆ ಇನ್ನಿತರ ಕಾಯಿಲೆಗಳಿಗೂ ಸರಿಯಾದ ಔಷಧಿ ಸಿಗದೇ ಇರುವುದರಿಂದ. ಕೊರೋನವನ್ನು ಎದುರಿಸಬೇಕು ನಿಜ. ಆದರೆ ಈ ವಿಶ್ವವನ್ನು ಹಲವು ದಶಕಗಳಿಂದ ಕಾಡುತ್ತಿರುವ ಹಸಿವನ್ನು ನಿರ್ಲಕ್ಷಿಸಿ ಕೊರೋನದ ಬಗ್ಗೆ ಮಾತನಾಡುವುದರಲ್ಲಿ ಯಾವ ಅರ್ಥವೂ ಇಲ್ಲ.

2020ರ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶದ ಪ್ರಕಾರ, 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸಂಬಂಧಿಸಿ ಶೇ.45 ಮರಣವು ಅಪೌಷ್ಟಿಕತೆಯಿಂದ ಸಂಭವಿಸುತ್ತದೆ. ಜಗತ್ತಿನಲ್ಲಿ 47 ಮಿಲಿಯನ್ ಮಕ್ಕಳು ನಿತ್ರಾಣದಿಂದ, 14 ಮಿಲಿಯನ್ ಮಕ್ಕಳು ಗಂಭೀರ ಪ್ರಮಾಣದ ನಿತ್ರಾಣದಿಂದ, 144 ಮಿಲಿಯನ್ ಮಕ್ಕಳು ಬೆಳವಣಿಗೆ ಕುಂಠಿತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಶ್ವದಲ್ಲಿ ಸಂಘರ್ಷ ಪೀಡಿತ ಪ್ರದೇಶಗಳು ಹಸಿವಿನ ಮತ್ತು ಅಪೌಷ್ಟಿಕತೆಯ ಸಮಸ್ಯೆಯಿರುವ ಬೃಹತ್ ವಲಯಗಳಾಗಿ ರೂಪುಗೊಳ್ಳುತ್ತಿವೆ. ಸಂಘರ್ಷ ಮತ್ತು ಬರಗಾಲ, ಅನಾವೃಷ್ಟಿಯ ಪರಿಸ್ಥಿತಿಯು ಬೃಹತ್ ಪ್ರಮಾಣದ ‘ತಪ್ಪಿಸಬಹುದಾದ ಹಸಿವಿನ ಮರಣ’ ಪ್ರಕರಣಗಳಿಗೆ ಕಾರಣವಾಗಿದೆ.

ಸಂಘರ್ಷ ಪೀಡಿತ ಪ್ರದೇಶದಲ್ಲಿ ಹಸಿವಿನ ಸಾವು ಹೆಚ್ಚುವ (ನಿರ್ದಿಷ್ಟವಾಗಿ ಕೊರೋನ ಸೋಂಕಿನ ಸಮಯದಲ್ಲಿ ಬಿಗಡಾಯಿಸಿದೆ) ಬಗ್ಗೆ ವಿಶ್ವ ಆರೋಗ್ಯ ಕಾರ್ಯಕ್ರಮಗಳಂತಹ ಪ್ರಮುಖ ಏಜೆನ್ಸಿಗಳು ಎಚ್ಚರಿಕೆ ನೀಡಿವೆ. ಇವೆಲ್ಲವೂ ಕೊರೋನ ಪೂರ್ವದ ವರದಿಗಳು. ಲಾಕ್‌ಡೌನ್ ಬಳಿಕ ಈ ಅಂಕಿ-ಅಂಶಗಳ ಸ್ಥಿತಿ ಇನ್ನಷ್ಟು ಭೀಕರವಾಗಿವೆ. ಸಣ್ಣ ಹಿಡುವಳಿ ಭೂಮಿಯುಳ್ಳ ರೈತರು, ಕಾರ್ಮಿಕರ ಸ್ಥಿತಿಯೂ ಚಿಂತಾಜನಕವಾಗಿದೆ. ಒಂದೆಡೆ ಲಾಕ್‌ಡೌನ್‌ನಿಂದಾಗಿ ದುಡಿಮೆಯ ದಾರಿಯನ್ನೇ ಕಳೆದುಕೊಂಡಿದ್ದಾರೆ. ಸಾರಿಗೆ ಸಂಪರ್ಕಗಳ ಕೊರತೆಯಿಂದಾಗಿಯೂ ರೈತರ ಕೃಷಿಗೆ ಬಹಳಷ್ಟು ಹಾನಿಯಾಗಿದೆೆ. ಆರ್ಥಿಕವಾಗಿ ಸರ್ವನಾಶವಾಗಿ ಕುಳಿತಿರುವ ಇವರು, ತಮ್ಮ ಬದುಕಿಗಾಗಿ ಇರುವ ಭೂಮಿಯನ್ನೇ ಮಾರಬೇಕಾದ ಸ್ಥಿತಿಗೆ ಬಂದಿದ್ದಾರೆ. ಸರಕಾರವೂ, ಇವರ ಭೂಮಿ ಮಾರಾಟಕ್ಕೆ ಸಕಲ ಅನುಕೂಲಗಳನ್ನು ಮಾಡಿಕೊಡುತ್ತಿದೆ. ಸಂದರ್ಭವನ್ನು ಕಾರ್ಪೊರೇಟ್ ಶಕ್ತಿಗಳು ಪೂರಕವಾಗಿ ಬಳಸಿಕೊಳ್ಳುತ್ತಿದ್ದಾರೆ.

ಇಂತಹ ರೈತರ ಸದ್ಯದ ಅತಿ ದೊಡ್ಡ ಅಗತ್ಯ ‘ಲಸಿಕೆ’ ಎಂದು ಬಿಂಬಿಸಿದರೆ, ಅದನ್ನು ಜನರು ನಂಬುವುದಾದರೂ ಹೇಗೆ? ಭಾರತದಲ್ಲಂತೂ ಲಸಿಕೆಯ ಕುರಿತಂತೆ ಸಾಕಷ್ಟು ವಿವಾದಗಳು ಎದ್ದಿವೆ. ಸ್ವದೇಶಿ ಲಸಿಕೆ ಎನ್ನುವ ಹೆಮ್ಮೆಯೇ ಅದಕ್ಕೆ ಮುಳುವಾಗಿದೆ. ಆದುದರಿಂದ, ಲಸಿಕೆಯ ಕುರಿತಂತೆ ಸರಕಾರ ಮೊದಲು ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಿ. ರಾಜಕಾರಣಿಗಳು, ಉನ್ನತ ಸರಕಾರಿ ಅಧಿಕಾರಿಗಳು ಮೊತ್ತ ಮೊದಲು ಈ ಲಸಿಕೆಯನ್ನು ಸ್ವೀಕರಿಸಲಿ. ಆಗ ಬಡವರಿಗೂ ಲಸಿಕೆಯ ಕುರಿತಂತೆ ನಂಬಿಕೆ ಹೆಚ್ಚುತ್ತದೆ. ಇದಕ್ಕೆ ಹೊರತಾಗಿ, ಲಾಕ್‌ಡೌನ್, ಕೊರೋನ ಅಲೆ ಮೊದಲಾದ ಬೆದರಿಕೆ, ಮಾನಸಿಕ ಒತ್ತಡಗಳನ್ನು ಹೇರಿ ಬಡವರಿಗೆ ಲಸಿಕೆಯನ್ನು ನೀಡುವ ಪ್ರಯತ್ನ ಸಲ್ಲ. ಒಂದು ವೇಳೆ ಅಂತಹ ಪ್ರಯತ್ನ ಮಾಡುವುದೇ ಆಗಿದ್ದರೆ, ಲಸಿಕೆ ಸ್ವೀಕರಿಸುವ ಎಲ್ಲರಿಗೂ ಸರಕಾರ ವಿಮೆಯನ್ನು ಒದಗಿಸಲಿ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳಾದರೆ ಅದರ ಹೊಣೆಯನ್ನು ಸರಕಾರ ಹೊತ್ತುಕೊಳ್ಳಬೇಕು. ಜನರಿಗೆ ಸೂಕ್ತ ಪರಿಹಾರವನ್ನು ನೀಡಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X