ಹರ್ಯಾಣ ಶಾಲೆಯೊಂದರ 54 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ಹೊಸದಿಲ್ಲಿ: ಹರ್ಯಾಣದ ಕರ್ನಾಲ್ ನ ಶಾಲೆಯೊಂದರ 54 ವಿದ್ಯಾರ್ಥಿಗಳಿಗೆ ಕೊರೋನ ವೈರಸ್ ಇರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಡಿಸೆಂಬರ್ ನಿಂದ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿಗೆ ತೆರಳಲು ಅವಕಾಶ ನೀಡಲಾಗಿತ್ತು. ಫೆ.24ರಿಂದ 3ರಿಂದ 5ರ ತನಕ ತರಗತಿಯನ್ನು ತೆರೆಯಲಾಗಿತ್ತು.
ಕರ್ನಾಲ್ ನ ಶಾಲೆಯೊಂದರ ಮೂವರು ಮಕ್ಕಳಲ್ಲಿ ಕೊರೋನ ಪಾಸಿಟಿವ್ ಕಂಡು ಬಂದಿತ್ತು. ಆ ನಂತರ ಇನ್ನಷ್ಟು ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದವರ ಪತ್ತೆ ಹಚ್ಚುವಿಕೆ ಹಾಗೂ ಪರೀಕ್ಷೆಗಳ ನಡೆಸಿದ ಬಳಿಕ ಇನ್ನೂ 54 ವಿದ್ಯಾರ್ಥಿಗಳಿಗೆ ಕೊರೋನ ಪಾಸಿಟಿವ್ ಆಗಿರುವುದು ಪತ್ತೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆಯ ಹಾಸ್ಟೆಲ್ ಕಟ್ಟಡವನ್ನು ಮುಚ್ಚಲಾಗಿದ್ದು, ಅದನ್ನು ಕಂಟೈನ್ ಮೆಂಟ್ ವಲಯವಾಗಿ ಘೋಷಿಸಲಾಗಿದೆ.
Next Story





