ವಿಕಲಚೇತನರಿಗೆ ಟ್ರೈ-ಸ್ಕೂಟರ್, ವೀಲ್ಚೇರ್ ವಿತರಣೆ

ಉಡುಪಿ, ಮಾ.2: ಉಡುಪಿ ನಗರಸಭೆಯ ಶೇ.5ರ ನಿಧಿಯಡಿಯಲ್ಲಿ 9 ಮಂದಿ ವಿಕಲಚೇತನ ಫಲಾನುಭವಿಗಳಿಗೆ ಟ್ರೈ-ಸ್ಕೂಟರ್ ಮತ್ತು ಒಬ್ಬರಿಗೆ ಗಾಲಿ ಕುರ್ಚಿಯನ್ನು ಇಂದು ನಗರಸಭೆ ಆವರಣದಲ್ಲಿ ವಿತರಿಸಲಾಯಿತು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಫಲಾನುಭವಿಗಳಿಗೆ ಸ್ಕೂಟರ್ ವಿತರಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಸದಸ್ಯರು ಗಳಾದ ಪ್ರಭಾಕರ್ ಪೂಜಾರಿ, ವಿಜಯ್ ಕೊಡವೂರು, ಶ್ರೀಷ ಕೊಡವೂರು, ಗಿರಿಧರ್ ಆಚಾರ್ಯ, ದಿನೇಶ್ ಪೈ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಿಶೋರ್ ಕರಂಬಳ್ಳಿ ಮತ್ತು ನಗರಸಭೆಯ ಪೌರಾಯುಕ್ತ ಉದಯ್ ಶೆಟ್ಟಿ, ನಗರಸಭೆಯ ವ್ಯವಸ್ಥಾಪಕ ವೆಂಕಟರಮಣ ಉಪಸ್ಥಿತರಿದ್ದರು.
Next Story





