ಬಸ್ ಢಿಕ್ಕಿ : ಸ್ಕೂಟರ್ ಸವಾರ ಮೃತ್ಯು
ಮಂಗಳೂರು, ಮಾ.2: ನಗರ ಹೊರವಲಯದ ಅಡ್ಯಾರ್ ದ್ವಾರದ ಬಳಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.
ಶಿವಾಜಿ ನಗರದ ಪ್ರಕಾಶ್ ವಿಲ್ಸನ್ ಫೆರ್ನಾಂಡಿಸ್ (44) ಮೃತಪಟ್ಟವರು. ಇವರು ತನ್ನ ಸ್ಕೂಟರ್‌ನಲ್ಲಿ ಮೇರಮಜಲು ಕಡೆಗೆ ಹೋಗುತ್ತಿದ್ದಾಗ ಬಸ್ ಢಿಕ್ಕಿ ಹೊಡೆದಿದೆ.
ಈ ಬಗ್ಗೆ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





