ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್, ನಟಿ ತಾಪ್ಸಿ ಪನ್ನು ನಿವಾಸದ ಮೇಲೆ ಐಟಿ ದಾಳಿ

ಅನುರಾಗ್ ಕಶ್ಯಪ್, ತಾಪ್ಸಿ ಪನ್ನು (Photo: PTI)
ಮುಂಬೈ: ತೆರಿಗೆ ವಂಚನೆ ಆರೋಪದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಂದು ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಹಾಗೂ ನಟಿ ತಾಪ್ಸಿ ಪನ್ನು ಅವರಿಗೆ ಸೇರಿರುವ ಮುಂಬೈನಲ್ಲಿರುವ ನಿವಾಸಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ ಮೂಲಗಳು ತಿಳಿಸಿವೆ.
ಟ್ಯಾಲೆಂಟ್ ಏಜೆನ್ಸಿ ಹಾಗೂ ಅನುರಾಗ್ ಕಶ್ಯಪ್, ನಿರ್ಮಾಪಕರಾದ ವಿಕಾಸ್ ಹಾಗೂ ಮಧು ಅವರ ಫಾಂಟಮ್ ಫಿಲ್ಮಸ್ ಸಹಿತ ಮುಂಬೈ ಹಾಗೂ ಪುಣೆಯಲ್ಲಿರುವ ಸುಮಾರು 20 ಸ್ಥಳಗಳಲ್ಲಿ ಶೋಧಕಾರ್ಯ ನಡೆದಿದೆ.
ಕಶ್ಯಪ್ ಹಾಗೂ ತಾಪ್ಸಿ ಪನ್ನು ಸರಕಾರವನ್ನು ಟೀಕಿಸುತ್ತಾ ಬಂದಿದ್ದು, ಈಗ ನಡೆಯುತ್ತಿರುವ ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ ಸಹಿತ ಹಲವು ವಿಚಾರಗಳಲ್ಲಿ ಸರಕಾರದ ವಿರುದ್ಧ ದ್ವನಿ ಎತ್ತಿದ್ದರು.
Next Story





