Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ವಾಕಿಂಗ್ ಅಥವಾ ರನಿಂಗ್....ಯಾವುದು...

ವಾಕಿಂಗ್ ಅಥವಾ ರನಿಂಗ್....ಯಾವುದು ಒಳ್ಳೆಯದು?

ವಾರ್ತಾಭಾರತಿವಾರ್ತಾಭಾರತಿ4 March 2021 12:09 AM IST
share
ವಾಕಿಂಗ್ ಅಥವಾ ರನಿಂಗ್....ಯಾವುದು ಒಳ್ಳೆಯದು?

ದೈಹಿಕ ಚಟುವಟಿಕೆ ಮತ್ತು ದೈಹಿಕ ಕ್ಷಮತೆ ಇವು ನಮ್ಮ ಬದುಕಿನ ಎರಡು ಮುಖ್ಯ ಭಾಗಗಳಾಗಿವೆ. ಹಲವಾರು ಶಾರೀರಿಕ ಕಾರ್ಯಗಳಿಗೆ ನೆರವಾಗುವ ಇವು ಹಲವಾರು ಆರೋಗ್ಯಲಾಭಗಳನ್ನೂ ನೀಡುತ್ತವೆ. ವ್ಯಾಯಾಮವು ನಮ್ಮ ಶರೀರವನ್ನು ಕ್ರಮಬದ್ಧಗೊಳಿಸುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ನಡಿಗೆ,ಈಜು ಮತ್ತು ಓಟದಂತಹ ಹಲವಾರು ದೈಹಿಕ ಚಟುವಟಿಕೆಗಳನ್ನು ನಾವು ನಡೆಸಬಹುದು. ಗುರಿ ಸಾಧನೆಗೆ ವಾಕಿಂಗ್,ಜಾಗಿಂಗ್ ಅಥವಾ ರನಿಂಗ್ ಇವುಗಳ ಪೈಕಿ ಯಾವುದು ಒಳ್ಳೆಯದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ನಡಿಗೆ ಮತ್ತು ಓಟ ಇವೆರಡೂ ವಿಶೇಷವಾಗಿ ತೂಕವನ್ನು ಇಳಿಸಿಕೊಳ್ಳಲು ಮತ್ತು ಹೃದಯದ ಒಳ್ಳೆಯ ಆರೋಗ್ಯಕ್ಕಾಗಿ ವ್ಯಾಯಾಮದ ಅತ್ಯುತ್ತಮ ವಿಧಗಳಾಗಿವೆ. ಇವುಗಳ ಲಾಭಗಳು ಮತ್ತು ಅನಾನುಕೂಲಗಳು ಗುರಿ,ಆರೋಗ್ಯ ಮತ್ತು ಕ್ಷಮತೆಯ ಮಟ್ಟವನ್ನು ಅವಲಂಬಿಸಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು.

 ನಡಿಗೆ ಮತ್ತು ಓಟ ಇವೆರಡೂ ಕ್ಯಾಲೊರಿಗಳನ್ನು ಕರಗಿಸುತ್ತವೆ,ಶರೀರದ ತೂಕವನ್ನು ಕಡಿಮೆ ಮಾಡುತ್ತವೆ ಮತ್ತು ಹೃದ್ರೋಗಗಳ ಅಪಾಯವನ್ನು ತಗ್ಗಿಸುತ್ತವೆ. ಆದರೆ ಇವರೆಡರ ಪೈಕಿ ಯಾವುದು ಒಳ್ಳೆಯದು ಎನ್ನುವುದು ಚರ್ಚಾರ್ಹ ಪ್ರಶ್ನೆಯಾಗಿದೆ. ಇವರೆಡರ ಆರೋಗ್ಯಲಾಭಗಳು ಹೆಚ್ಚುಕಡಿಮೆ ಒಂದೇ ಆಗಿವೆ. ಆದರೆ ಓಟಕ್ಕೆ ಹೆಚ್ಚಿನ ಪ್ರಯತ್ನ ಮತ್ತು ಚಲನೆ ಅಗತ್ಯವಾಗಿರುವುದರಿಂದ ಸಹಜವಾಗಿಯೇ ಅದು ನಡಿಗೆಗಿಂತ ಹೆಚ್ಚಿನ ಕ್ಯಾಲೊರಿಗಳನ್ನು ಕರಗಿಸುತ್ತದೆ. ದೇಹತೂಕವನ್ನು ಒಂದು ಪೌಂಡ್‌ನಷ್ಟು ಕಡಿಮೆ ಮಾಡಿಕೊಳ್ಳಬೇಕಿದ್ದರೆ ಸುಮಾರು 3,500 ಕ್ಯಾಲೊರಿಗಳನ್ನು ಕರಗಿಸಬೇಕಾಗುತ್ತದೆ. ನಡಿಗೆ ಮತ್ತು ಓಟದ ಆರೋಗ್ಯಲಾಭಗಳು ಮತ್ತು ಅಪಾಯಗಳ ಕುರಿತು ಮಾಹಿತಿಗಳಿಲ್ಲಿವೆ.....

ನಡಿಗೆ ಮತ್ತು ಓಟ ನೀಡುವ ಸಮಾನ ಮುಖ್ಯ ಲಾಭಗಳು

* ಶಕ್ತಿಯನ್ನು ಹೆಚ್ಚಿಸುತ್ತದೆ

ವ್ಯಾಯಾಮದ ಇವೆರಡೂ ವಿಧಗಳು ಸ್ನಾಯುಗಳ ಬಲವನ್ನು,ಶಕ್ತಿಯನ್ನು ಮತ್ತು ಕ್ಷಮತೆಯನ್ನು ಹೆಚ್ಚಿಸುತ್ತವೆ. ದೈಹಿಕ ಕ್ಷಮತೆ ಮತ್ತು ಶಕ್ತಿಯು ಹೆಚ್ಚುವುದರಿಂದ ದಿನವಿಡೀ ಹೆಚ್ಚು ಕ್ರಿಯಾಶೀಲರಾಗಿರಲು ಸಾಧ್ಯವಾಗುತ್ತದೆ. ನಿರ್ದಿಷ್ಟವಾಗಿ ಓಟವು ನಮ್ಮ ಅಂಗಾಂಶಗಳಿಗೆ ಆಮ್ಲಜನಕ ಮತ್ತು ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ ಮತ್ತು ಹೃದಯವು ಹೆಚ್ಚು ದಕ್ಷತೆಯಿಂದ ಕಾರ್ಯ ನಿರ್ವಹಿಸಲು ನೆರವಾಗುತ್ತದೆ. ಹೃದಯ ಮತ್ತು ಶ್ವಾಸಕೋಶಗಳ ಕಾರ್ಯ ನಿರ್ವಹಣೆ ಉತ್ತಮಗೊಂಡಾಗ ಶರೀರದಲ್ಲಿ ಶಕ್ತಿಯು ಹೆಚ್ಚುತ್ತದೆ.

* ದೇಹತೂಕ ಇಳಿಸಲು ನೆರವಾಗುತ್ತದೆ

ಓಟ ಮತ್ತು ದೇಹದ ತೂಕವನ್ನು ಇಳಿಸಲು ಮತ್ತು ಅತಿಯಾದ ತೂಕ ಗಳಿಕೆಯನ್ನು ನಿವಾರಿಸಲು ನೆರವಾಗುತ್ತವೆ. ಆರೋಗ್ಯಕರವಾದ ದೇಹತೂಕವನ್ನು ಕಾಯ್ದುಕೊಳ್ಳುವಲ್ಲಿ ದೈಹಿಕ ಚಟುವಟಿಕೆಯು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನಾವು ನಡೆದಾಗ ಅಥವಾ ನಿರ್ದಿಷ್ಟವಾಗಿ ಓಟದಲ್ಲಿ ತೊಡಗಿಕೊಂಡಾಗ ದೇಹದಲ್ಲಿಯ ಕ್ಯಾಲೊರಿಗಳು ಕರಗುತ್ತವೆ. ವ್ಯಾಯಾಮದ ತೀವ್ರತೆ ಹೆಚ್ಚಿದಷ್ಟೂ ಕ್ಯಾಲೊರಿಗಳ ಕರಗುವಿಕೆಯೂ ಹೆಚ್ಚಾಗುತ್ತದೆ.

* ಮೂಡ್ ಅನ್ನು ಹೆಚ್ಚಿಸುತ್ತದೆ

ವಾಕಿಂಗ್ ಮತ್ತು ರನಿಂಗ್ ನಮ್ಮ ಮೂಡ್ ಅನ್ನು ಹೆಚ್ಚಿಸಬಲ್ಲವು. ಮನಸ್ಸಿನಲ್ಲಿ ಬೇಸರದ ಭಾವನೆ ಮೂಡಿದಾಗ ಒಂದಿಷ್ಟು ದೂರ ಓಡುವುದು ಒಳ್ಳೆಯದು. ಇದು ಮಿದುಳನ್ನು ತಾಜಾಗೊಳಿಸುತ್ತದೆ ಮತ್ತು ನಿರಾಳತೆಯ ಭಾವನೆಯನ್ನು ಮೂಡಿಸುತ್ತದೆ. ವಾಸ್ತವದಲ್ಲಿ ಓಟವು ನಮ್ಮನ್ನು ಉಲ್ಲಸಿತರನ್ನಾಗಿಸುವ ಮಿದುಳಿನಲ್ಲಿಯ ಹಲವಾರು ರಾಸಾಯನಿಕಗಳನ್ನು ಪ್ರಚೋದಿಸುತ್ತದೆ. ನಾವು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಮಿದುಳು ಎಂಡೊಮಾರ್ಫಿನ್‌ಗಳನ್ನು ಬಿಡುಗಡೆಗೊಳಿಸುತ್ತದೆ ಮತ್ತು ಇವು ನೋವಿನ ಗ್ರಹಿಕೆಯನ್ನು ತಗ್ಗಿಸುತ್ತವೆ. ವಾಕಿಂಗ್ ಮತ್ತು ರನಿಂಗ್ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ.

* ಚರ್ಮಕ್ಕೆ ಒಳ್ಳೆಯದು

 ನಮ್ಮ ಶರೀರದಲ್ಲಿ ಉತ್ಕರ್ಷಣ ಒತ್ತಡವು ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ಫ್ರೀ ರ್ಯಾಡಿಕಲ್‌ಗಳು ಜೀವಕೋಶಗಳಿಗೆ ಉಂಟು ಮಾಡಿರುವ ಹಾನಿಯನ್ನು ಪೂರ್ಣವಾಗಿ ಸರಿಪಡಿಸಲು ಶರೀರದ ಉತ್ಕರ್ಷಣ ನಿರೋಧಕ ವ್ಯವಸ್ಥೆಗೆ ಸಾಧ್ಯವಾಗದಿದ್ದಾಗ ಈ ಸ್ಥಿತಿಯು ಉಂಟಾಗುತ್ತದೆ. ನಾವು ಸೇವಿಸುವ ಆಹಾರ ಅಥವಾ ಔಷಧಿಗಳಿಂದಾಗಿ ನಾವು ನಮ್ಮ ಶರೀರದಲ್ಲಿ ಬಹಳಷ್ಟು ಫ್ರೀ ರ್ಯಾಡಿಕಲ್‌ಗಳನ್ನು ಹೊಂದಿರುತ್ತೇವೆ. ಇವು ನಮ್ಮ ಆಂತರಿಕ ರಚನೆಗಳಿಗೆ ಹಾನಿಯನ್ನುಂಟು ಮಾಡುತ್ತವೆ ಮತ್ತು ಚರ್ಮವನ್ನು ಹದಗೆಡಿಸುತ್ತವೆ. ತೀವ್ರವಾದ ದೈಹಿಕ ಚಟುವಟಿಕೆ ಉತ್ಕರ್ಷಕ ಹಾನಿಯಲ್ಲಿ ತನ್ನ ಪಾಲು ಹೊಂದಿದೆಯಾದರೂ ನಡಿಗೆ ಮತ್ತು ಓಟ ನಮ್ಮ ಶರೀರದಲ್ಲಿ ನೈಸರ್ಗಿಕವಾಗಿ ಉತ್ಕರ್ಷಣ ನಿರೋಧಕಗಳ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಮತ್ತು ಇವು ಜೀವಕೋಶಗಳ ರಕ್ಷಣೆಗೆ ಹಾಗೂ ಚರ್ಮದ ಆರೋಗ್ಯವನ್ನು ಹೆಚ್ಚಿಸಲು ನೆರವಾಗುತ್ತವೆ.

* ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ

ಹೃದಯ ರಕ್ತನಾಳಗಳ ಆರೋಗ್ಯವು ನಡಿಗೆ ಮತ್ತು ಓಟ ನೀಡುವ ಪ್ರಮುಖ ಲಾಭಗಳಲ್ಲೊಂದಾಗಿದೆ. ಓಟವು ಅಧಿಕ ಕೊಲೆಸ್ಟ್ರಾಲ್ ಮತ್ತು ಮಧುಮೇಹದ ಅಪಾಯವನ್ನು ತಗ್ಗಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ದೈಹಿಕ ಚಟುವಟಿಕೆಗಳು ಹೃದಯ ರೋಗಗಳ ಅಪಾಯವನ್ನು ಗಣನೀಯವಾಗಿ ತಗ್ಗಿಸಬಲ್ಲವು. ನಡಿಗೆಯ ವೇಳೆ ನಾವು ಇಡುವ ಪ್ರತಿ ಹೆಜ್ಜೆಯೂ ನಮ್ಮ ಹೃದಯದ ಆರೋಗ್ಯಕ್ಕೆ ಲಾಭಕಾರಿಯಾಗಿದೆ. ಶರೀರದ ಒಟ್ಟಾರೆ ಕಾರ್ಯ ನಿರ್ವಹಣೆಗೆ ಆರೋಗ್ಯಕರ ಹೃದಯವು ಮುಖ್ಯವಾಗಿದೆ. ಓಟ ಮತ್ತು ನಡಿಗೆ ರಕ್ತದೊತ್ತಡವನ್ನು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಹಾಗೂ ಶಕ್ತಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತವೆ.

ಅಪಾಯಗಳು

ನಡಿಗೆಯು ಕಡಿಮೆ ತೀವ್ರತೆಯ ದೈಹಿಕ ಚಟುವಟಿಕೆಯಾಗಿದ್ದು ಓಟದಂತೆ ಮೂಳೆ ಮುರಿತ ಮತ್ತು ಗಾಯಗಳಂತಹ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡುವುದಿಲ್ಲ. ಆದರೆ ಓಟವು ಹೆಚ್ಚು ಪರಿಣಾಮವನ್ನು ಬೀರುವ ವ್ಯಾಯಾಮವಾಗಿದ್ದು,ಅದು ಸಾಮಾನ್ಯ ನಡಿಗೆಯಂತೆ ಸುಲಭವಲ್ಲ. ಓಟವು ಕಾಲಕ್ರಮೇಣ ಕಾಲುಗಳು ಮತ್ತು ಪಾದಗಳಲ್ಲಿ ಒತ್ತಡದ ಮೂಳೆಮುರಿತಗಳು,ಮಂಡಿ ಮತ್ತು ಕಣಕಾಲುಗಳಲ್ಲಿ ನೋವು ಮತ್ತು ಐಟಿಬಿ ಫ್ರಿಕ್ಷನ್ ಸಿಂಡ್ರೋಮ್‌ಗೆ ಕಾರಣವಾಗಬಹುದು.

ಓಟ ಮತ್ತು ನಡಿಗೆಯನ್ನು ನಿಮ್ಮ ಗುರಿಯನ್ನು ಆಧರಿಸಿ ಹೋಲಿಸಬಹುದಾಗಿದೆ. ನೀವು ದೇಹತೂಕವನ್ನು ಇಳಿಸಿಕೊಳ್ಳಲು ಬಯಸಿದ್ದರೆ ಓಟ ನಿಮ್ಮ ಪಾಲಿಗೆ ಉತ್ತಮ ಆಯ್ಕೆಯಾಗಬಹುದು.ನಡಿಗೆಗೆ ಹೋಲಿಸಿದರೆ ಓಟವು ಹೆಚ್ಚಿನ ಪ್ರಯತ್ನ ಮತ್ತು ಚಲನೆಯಿಂದಾಗಿ ಅಧಿಕ ಕ್ಯಾಲೊರಿಗಳನ್ನು ಕರಗಿಸುತ್ತದೆ. ಅದೇ,ನಡಿಗೆಯನ್ನು ಮಧ್ಯವಯಸ್ಕರು ಮತ್ತು ಹಿರಿಯರು ಸೇರಿದಂತೆ ಯಾರು ಬೇಕಾದರೂ ಮಾಡಬಹುದು.

ಅನಾರೋಗ್ಯ ಮತ್ತು ವಯಸ್ಸಾಗುವಿಕೆಯಿಂದಾಗಿ ಹಲವಾರು ಜನರಿಗೆ ಓಡಲು ಸಾಧ್ಯವಾಗುವುದಿಲ್ಲ. ನೀವು ಮೊದಲ ಬಾರಿಗೆ ಓಟದ ವ್ಯಾಯಾಮವನ್ನು ಮಾಡುತ್ತಿದ್ದರೆ ನೇರವಾಗಿ ಓಟಕ್ಕಿಳಿಯದೆ ಕಿರು ವಾಕಿಂಗ್ ಅಥವಾ ಜಾಗಿಂಗ್ ಮೂಲಕ ಆರಂಭಿಸುವುದು ಜಾಣತನವಾಗುತ್ತದೆ.

 ಓಟ ಮತ್ತು ನಡಿಗೆ ಇವೆರಡೂ ಹಲವಾರು ಲಾಭಗಳನ್ನು ನೀಡುತ್ತವೆ ಮತ್ತು ದೈಹಿಕ ವ್ಯಾಯಾಮದ ಉತ್ತಮ ರೂಪಗಳಾಗಿವೆ. ಇವೆರಡರ ಪೈಕಿ ಯಾವುದನ್ನು ನೀವು ಆಯ್ದುಕೊಂಡರೂ ನಿಯಮಿತವಾಗಿ ಮಾಡುತ್ತಿದ್ದರೆ ಧನಾತ್ಮಕ ಫಲಿತಾಂಶಗಳನ್ನು ಪಡೆಯಬಹುದು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X