ಮಾ.8: ಪವರ್ನಿಂದ ಚಾರ್ಟರ್ ಡೇ ಆಚರಣೆ
ಉಡುಪಿ, ಮಾ.4: 2009ರಲ್ಲಿ ಪ್ರಾರಂಭಗೊಂಡ ಜಿಲ್ಲೆಯ ಮಹಿಳಾ ಉದ್ಯಮಿಗಳ ‘ಪವರ್’ ಸಂಸ್ಥೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಉಬುಂಟು ಮಹಿಳಾ ಉದ್ಯಮಿಗಳ ಸಂಘದ ಜಂಟಿ ಸಹಯೋಗದಲ್ಲಿ ಇದೇ ಮಾ.6ರಂದು ಮಣಿಪಾಲದ ಸೆಂಟ್ರಲ್ ಪಾರ್ಕ್ ಹೊಟೇಲ್ ಸಭಾಂಗಣದಲ್ಲಿ ‘ಚಾರ್ಟರ್ ಡೇ’ಯನ್ನು ಆಚರಿಸಲಿದೆ ಎಂದು ಪವರ್ ಸಂಸ್ಥೆಯ ಅಧ್ಯಕ್ಷೆ ಪುಷ್ಪಾ ಜಿ.ರಾವ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.6ರ ಸಂಜೆ 4:00 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ವೀಣಾ ವಿವೇಕಾನಂದ, ಉಬುಂಟುನ ಜೊತೆ ಕಾರ್ಯದರ್ಶಿ ದೇವಕಿ ಯೋಗಾನಂದ ಅತಿಥಿ ಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜಿಲ್ಲೆಯ ಮಹಿಳಾ ಸಾಧಕಿಯರಾದ ಕಲ್ಪ ಟ್ರಸ್ಟ್ನ ಪ್ರಮೀಳಾ ರಾವ್ ಹಾಗೂ ಮಂಗಳೂರು ಅನಿಮಲ್ ಕೇರ್ ಟ್ರಸ್ಟ್ನ ಸುಮಾ ನಾಯಕ್ ರನ್ನು ಗೌರವಿಸಿ ಸನ್ಮಾನಿಸಲಾಗುವುದು ಎಂದರು.
ಅಲ್ಲದೇ ಪವರ್ನ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣವೂ ನಡೆಯಲಿದೆ. ಮುಂದಿನ ಸಾಲಿನ ಅಧ್ಯಕ್ಷರಾಗಿ ತಾರಾ ತಿಮ್ಮಯ್ಯ, ಕಾರ್ಯದರ್ಶಿಯಾಗಿ ಪ್ರಿಯಾ ಕಾಮತ್ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾರಾ ತಿಮ್ಮಯ್ಯ, ಸುವರ್ಷಾ ಮಿಂಜ್, ಸುಗುಣ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.