ಇಪಿಎಫ್ ಠೇವಣಿ ಬಡ್ಡಿದರ 8.5% ನಿಗದಿ: ಸರಕಾರ

ಹೊಸದಿಲ್ಲಿ, ಮಾ.4: ಕಾರ್ಮಿಕರ ಭವಿಷ್ಯನಿಧಿ(ಇಪಿಎಫ್) ಠೇವಣಿ ಮೇಲಿನ ಬಡ್ಡಿದರ 2020-21ರಲ್ಲೂ ಯಥಾಸ್ಥಿತಿಯಲ್ಲೇ ಮುಂದುವರಿಯಲಿದ್ದು 8.5% ಬಡ್ಡಿದರ ನಿಗದಿ ಮಾಡಲಾಗಿದೆ ಎಂದು ಇಪಿಎಫ್‌ಒ ಪ್ರಕಟಿಸಿದೆ.
2019-20ರಲ್ಲಿ ನಿಗದಿಗೊಳಿಸಿದ್ದ ದರವನ್ನೇ 2020-21ರಲ್ಲೂ ಮುಂದುವರಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಶ್ ಗಂಗ್ವಾರ್ ಹೇಳಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಇಪಿಎಫ್ ಠೇವಣಿ ಮೇಲಿನ ಬಡ್ಡಿದರ ಕುರಿತು ಗುರುವಾರ ಶ್ರೀನಗರದಲ್ಲಿ ನಡೆದ ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯ ಕೇಂದ್ರ ಮಂಡಳಿಯ ಸದಸ್ಯರ ಸಭೆಯಲ್ಲಿ ಕಳೆದ ವರ್ಷದ ಬಡ್ಡಿದರವನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ. 2018-19ರಲ್ಲಿ 8.65%ವಿದ್ದ ಬಡ್ಡಿದರವನ್ನು 2019-20ರಲ್ಲಿ 8.5%ಕ್ಕೆ ಇಳಿಸಲಾಗಿದೆ ಎಂದು ವರದಿ ಹೇಳಿದೆ.
Next Story