Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಇನ್ನು ಮುಂದೆ ನಿರ್ದಿಷ್ಟ ಚಾಲನಾ...

ಇನ್ನು ಮುಂದೆ ನಿರ್ದಿಷ್ಟ ಚಾಲನಾ ಪರವಾನಿಗೆ, ನೋಂದಣಿ ಸಂಬಂಧಿತ ಸೇವೆಗಳು ಆನ್‌ಲೈನ್‌ಲ್ಲಿ ಲಭ್ಯ

ವಾರ್ತಾಭಾರತಿವಾರ್ತಾಭಾರತಿ5 March 2021 9:42 PM IST
share
ಇನ್ನು ಮುಂದೆ ನಿರ್ದಿಷ್ಟ ಚಾಲನಾ ಪರವಾನಿಗೆ, ನೋಂದಣಿ ಸಂಬಂಧಿತ ಸೇವೆಗಳು ಆನ್‌ಲೈನ್‌ಲ್ಲಿ ಲಭ್ಯ

ಹೊಸದಿಲ್ಲಿ, ಮಾ. 3: ಚಾಲನಾ ಪರವಾನಿಗೆ ಹಾಗೂ ನೋಂದಣಿ ಪ್ರಮಾಣಪತ್ರಕ್ಕೆ ಸಂಬಂಧಿಸಿದ ನಿರ್ದಿಷ್ಟ ಸೇವೆಗಳು ಇನ್ನು ಮುಂದೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿದ ಸುತ್ತೋಲೆ ತಿಳಿಸಿದೆ.

ಅಂದರೆ ಇನ್ನು ಮುಂದೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡದೆ ಆಧಾರ್ ದೃಢೀಕರಣದ ಮೂಲಕ ಸ್ವಯಂಪ್ರೇರಿತವಾಗಿ ಯಾರು ಕೂಡ ತಮ್ಮ ಚಾಲನಾ ಪರವಾನಿಗೆ ನವೀಕರಣಗೊಳಿಸಬಹುದು. ಆರ್‌ಸಿಯ ನಕಲು ಹಾಗೂ ಇಂತಹ ಇತರ ಸೇವೆಗಳನ್ನು ಪಡೆಯಬಹುದು. ಇದರ ಉದ್ದೇಶ ಪ್ರಕ್ರಿಯೆಯನ್ನು ಸುಗಮಗೊಳಿಸುವುದು ಹಾಗೂ ನಾಗರಿಕರ ಸಂಪರ್ಕವಿಲ್ಲದೆ, ಅವರಿಗೆ ತೊಂದರೆ ಮುಕ್ತ ಸೇವೆ ನೀಡುವುದು.

ಇನ್ನು ಮುಂದೆ ಇಂತಹ 18 ಸಂಪರ್ಕ ರಹಿತ ಸೇವೆ ಲಭ್ಯವಾಗಲಿದೆ. ಉತ್ತಮ ಆಡಳಿತದ ಖಾತರಿ ನೀಡಲು ಡಿಜಿಟಲ್ ವೇದಿಕೆಯನ್ನು ಬಳಸಲು ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಎಲ್ಲ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಸುತ್ತೋಲೆ ಹೇಳಿದೆ. ಆನ್‌ಲೈನ್ ಸೇವೆ ಬಯಸುವರು ಆಧಾರ್ ದೃಢೀಕರಣಕ್ಕೆ ಒಳಗಾಗಬೇಕು. ಈ ಆನ್‌ಲೈನ್ ಸೇವೆ ಬಗ್ಗೆ ಮಾಧ್ಯಮದ ಮೂಲಕ ವ್ಯಾಪಕ ಪ್ರಚಾರ ಮಾಡಲು ಎಲ್ಲ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ, ಅನುಷ್ಠಾನಗೊಳಿಸಿದ ಏಜೆನ್ಸಿ ಮೂಲಕ ಸಂಪರ್ಕ ರಹಿತ ಸೇವೆ ಲಭ್ಯವಾಗಲು ಆಧಾರ್‌ನ ಅಗತ್ಯತೆ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸಲು ವೈಯುಕ್ತಿಕವಾಗಿ ನೋಟಿಸು ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಈ ಆನ್‌ಲೈನ್ ಸೇವೆ 2021 ಮಾರ್ಚ್ 3ರಿಂದ ಅಸ್ತಿತ್ವಕ್ಕೆ ಬರಲಿದೆ. ಆಧಾರ್ ದೃಢೀಕರಣಗೊಳಿಸಿದ ಬಳಿಕ ಜನರಿಗೆ ಎಲ್ಲಾ 18 ಸಂಪರ್ಕ ರಹಿತ ಸೇವೆ ಲಭ್ಯವಾಗಲಿದೆ ಎಂದು ಸುತ್ತೋಲೆ ತಿಳಿಸಿದೆ.

18 ಸೇವೆಗಳು

1. ಕಲಿಕಾ ಲೈಸನ್ಸ್

2.ಚಾಲನೆ ಸಾಮರ್ಥ್ಯದ ಪರೀಕ್ಷೆ ಅಗತ್ಯವಿಲ್ಲದವರ ಚಾಲನಾ ಪರವಾನಿಗೆ ನವೀಕರಣ

3. ಚಾಲನಾ ಪರವಾನಿಗೆಯ ನಕಲು

4. ಚಾಲನಾ ಪರವಾನಿಗೆ ಹಾಗೂ ನೋಂದಣಿ ಪ್ರಮಾಣ ಪತ್ರದಲ್ಲಿ ವಿಳಾಸ ಬದಲಾವಣೆ

5. ಅಂತಾರಾಷ್ಟ್ರೀಯ ಚಾಲನಾ ಪರಾನಿಗೆ ಒದಗಿಸುವುದು

6. ಪರವಾನಿಗೆ ವಾಪಸಾತಿ

7. ಮೋಟಾರು ವಾಹನಗಳ ತಾತ್ಕಾಲಿಕ ನೋಂದಣಿಗೆ ಅರ್ಜಿ

8. ಸಂಪೂರ್ಣವಾಗಿ ಬಾಡಿ ಕಟ್ಟಿದ ಮೋಟಾರು ವಾಹನದ ನೋಂದಣಿ ಅರ್ಜಿ

9. ನೋಂದಣಿ ಪ್ರಮಾಣ ಪತ್ರದ ನಕಲು ಒದಗಿಸಲು ಅರ್ಜಿ

10.ನೋಂದಣಿ ಪ್ರಮಾಣಪತ್ರಕ್ಕೆ ಎನ್‌ಒಸಿ ಒದಗಿಸಲು ಅರ್ಜಿ

11. ಮೋಟಾರು ವಾಹನದ ಮಾಲಕತ್ವದ ವರ್ಗಾವಣೆಗೆ ನೋಟಿಸ್

12. ಮೋಟಾರು ವಾಹನದ ಮಾಲಕತ್ವದ ವರ್ಗಾವಣೆಗೆ ಅರ್ಜಿ

13. ನೋಂದಣಿ ಪ್ರಮಾಣಪತ್ರದ ವಿಳಾಸ ಬದಲಾವಣೆಗೆ ಸೂಚನೆ

14.ಮಾನ್ಯತೆ ಪಡೆದ ಚಾಲಕರ ತರಬೇತು ಕೇಂದ್ರದಲ್ಲಿ ಚಾಲಕರ ತರಬೇತಿ ಪಡೆಯಲು ನೋಂದಣಿಗೆ ಅರ್ಜಿ

15. ರಾಜತಾಂತ್ರಿಕ ಅಧಿಕಾರಿಗಳ ಮೋಟಾರು ವಾಹನ ನೋಂದಣಿಗೆ ಅರ್ಜಿ

16. ರಾಜತಾಂತ್ರಿಕ ಅಧಿಕಾರಿಯ ಮೋಟಾರು ವಾಹನಗಳ ಹೊಸ ನೋಂದಣಿ ಗುರುತು ಹಂಚಿಕೆಗೆ ಅರ್ಜಿ

17. ಬಾಡಿಗೆ-ಖರೀದಿ ಒಪ್ಪಂದಕ್ಕೆ ಅನುಮೋದನೆ

18. ಬಾಡಿಗೆ-ಖರೀದಿ ಒಪ್ಪಂದ ರದ್ದು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X