ಉಡುಪಿ: ಎನ್.ಎಸ್.ಎಲ್.ಗೆ ಶೃದ್ಧಾಂಜಲಿ

ಉಡುಪಿ, ಮಾ.6: ಶನಿವಾರ ಬೆಂಗಳೂರಿನಲ್ಲಿ ನಿಧನರಾದ ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರಿಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕಾಲೇಜಿನ ವತಿಯಿಂದ ಆಯೋಜಿಸಲಾಗಿರುವ ‘ಪುಸ್ತಕೋತ್ಸವ’ದ ಮಧ್ಯೆ ಶೃದ್ಧಾಂಜಲಿ ಅರ್ಪಿಸಲಾಯಿತು.
ಉಡುಪಿಯ ಹಿರಿಯ ಸಾಹಿತಿ ಕು.ಗೋ. ಕವಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯ್ಕ ನುಡಿನಮನ ಸಲ್ಲಿಸಿ, ಲಕ್ಷ್ಮೀನಾರಾಯಣ ಭಟ್ಟರ ಸರಳತೆ, ಜೀವನಾದರ್ಶನಗಳನ್ನು ನೆನೆದರು.
ಪುಸ್ತಕೋತ್ಸವದ ಸಂಚಾಲಕ ಕಿಶೋರ್ ಎಚ್.ವಿ, ಕನ್ನಡ ವಿಭಾಗ ಮುಖ್ಯಸ್ಥ ಡಾ.ಪುತ್ತಿ ವಸಂತ್ ಕುಮಾರ್ ಉಪಸ್ಥಿತರಿದ್ದರು.
Next Story





