ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಲ್ಲಿ ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣಗಳ ಪ್ರದರ್ಶನಕ್ಕೆ ಚಾಲನೆ

ಉಡುಪಿ, ಮಾ.6: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯ ಗೀತಾಂಜಲಿ ಶೋಪರ್ ಸಿಟಿ ಕಟ್ಟಡದಲ್ಲಿರುವ ಉಡುಪಿ ಶೋರೂಮ್ ನಲ್ಲಿ 9 ದಿನಗಳ ಕಾಲ ಆಯೋಜಿಸಲಾದ ಆರ್ಟಿಸ್ಟ್ರಿ ಬ್ರಾಂಡೆಡ್ ಜುವೆಲ್ಲರಿ ಶೋ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.
ಮಹೇಶ್ ಬೆಟ್ಟಿನ್, ಆಶಾ ಅಮೀನ್ ಮಲ್ಪೆ, ಬಿಂದು ತಂಗಪ್ಪನ್ ಕ್ರಮವಾಗಿ ಎರಾ, ಡಿವೈನ್ ಚಿನ್ನಾಭರಣ, ವಜ್ರಾಭರಣಗಳನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.
ಉಡುಪಿಯ ರೂಪದರ್ಶಿಗಳಾದ ವೈಭವಿ ಭಂಡಾರಿ ಮಣಿ ಪಾಲ್, ಪ್ರಸಿದ್ದಿ ಸಾಲ್ಯಾನ್, ಅಕ್ಷತಾ ಕೆ.ಶೆಟ್ಟಿ, ಅನುಷಾ ಅಮೀನ್, ಮೌಸಮಿ ಶೆಟ್ಟಿ ಕಾಪು, ರಕ್ಷಿತಾ ಶೆಟ್ಟಿ ವಕ್ವಾಡಿ ಆಭರಣಗಳನ್ನು ಧರಿಸಿ ರಾಂಪ್ ವಾಕ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಉಡುಪಿ ಶೋರೂಮ್ ಮುಖ್ಯಸ್ಥ ಹಫೀಝ್ ರಹ್ಮಾನ್ ಮಾತನಾಡಿ, ಆರ್ಟಿಸ್ಟ್ರಿ ಬ್ರಾಂಡೆಡ್ ಜುವೆಲ್ಲರಿಯ ಸಬ್ ಬ್ರಾಂಡ್ ಚಿನ್ನಾಭರಣ ಪ್ರದರ್ಶನ ದಲ್ಲಿ ವಿವಿಧ ನಮೂನೆಯ ಚಿನ್ನ ಮತ್ತು ವಜ್ರಾಭರಣಗಳ ಸಂಗ್ರಹಗಳಿವೆ. ‘ಮೈನ್’ನಲ್ಲಿ ವಜ್ರಾಭರಣಗಳ ಅಭೂತ ಪೂರ್ವ ಸಂಗ್ರಹ, ನವ ವಧುವಿನ ವಿಶಿಷ್ಟ ಸಂಗ್ರಹ ಹಾಗೂ ಪ್ರಮಾಣಿಕೃತ ವಜ್ರಾಭಾರಣಗಳಿದ್ದು, ಡಿವೈನ್ನಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿನ್ನಾಭರಣಗಳ ಸಂಗ್ರಹವಿದೆ ಎಂದರು.
ಪ್ರಶಿಯಾ’ಲ್ಲಿ ರುಬಿ, ಎಮರಾಲ್ಡ್ ಅಮೂಲ್ಯ ಹರಳುಗಳ ಸಮಕಾಲೀನ ಚಿನ್ನಾಭರಣಗಳ ಸಂಗ್ರಹವಿದ್ದು, ’ಎಥಿನಿಕ್ಸ್’ನಲ್ಲಿ ಕೈಕುಶಲತೆಯ ಸೊಬಗಿನ ಪಾರಂಪರಿಕ ಚಿನ್ನಾಭರಣಗಳ ಪ್ರದರ್ಶನ ಹಾಗೂ ಮಾರಾಟವಿದೆ. ‘ಏರ’ ಅನ್ ಕಟ್ ಡೈಮಂಡ್ಸ್ ಹಾಗೂ ಚಿನ್ನಾಭರಣಗಳ ಅಪೂರ್ವ ಸಂಗ್ರಹವಾದರೆ ‘ಹಾಯ್’ಯಲ್ಲಿ ಯುವತಿಯರ ಮನಸೆಳೆಯುವ ಮನಮೋಹಕ ಆಭರಣ ಗಳಿವೆ. ಸ್ಟಾರ್ಲೆಟ್ನಲ್ಲಿ ಚಿಕ್ಕ ಮಕ್ಕಳಿಗಾಗಿ ಅತ್ಯಾಕರ್ಷಕ ವಿನ್ಯಾಸಗಳಿಂದ ಕೂಡಿದ ಚಿನ್ನಾಭರಣಗಳು ಈ ಪ್ರದರ್ಶನದ ವಿಶೇಷವಾಗಿದೆಂದು ಅವರು ತಿಳಿಸಿದರು.
ಈ ಮೇಳದಲ್ಲಿ ಸಂಪೂರ್ಣ ಪಾರದರ್ಶಕ, ಉಚಿತ ನಿರ್ವಹಣೆ, ವಿನಿಮಯ ದಲ್ಲಿ ಶೂನ್ಯ ಕಡಿತ, ಬೈಬ್ಯಾಕ್ ಗ್ಯಾರಂಟಿ, ಉಚಿತ ವಿಮೆ, ಎಲ್ಲಾ ಆಭರಣಗಳು ಸಹ ಹಾಲ್ಮಾರ್ಕ್ ಹೊಂದಿದ್ದು, 28 ರೀತಿಯ ಪರೀಕ್ಷೆ ಮಾಡಿದ ವಜ್ರಾ ಭರಣಗಳು ಇಲ್ಲಿನ ವಿಶೇಷತೆಯಾಗಿದೆ. ಗ್ರಾಹಕರಿಗೆ ಒನ್ ಇಂಡಿಯಾ ಒನ್ ಗೋಲ್ಡ್ ರೇಟ್, ಶುದ್ಧ ಚಿನ್ನ ಸುಂದರ ವಿನ್ಯಾಸಗಳು ನ್ಯಾಯ ಸಮ್ಮತವಾದ ತಯಾರಿಕಾ ಶುಲ್ಕ, ಬ್ರಾಂಡೆಡ್ ವಾಚ್‌ಗಳ ಮೇಲೆ ವಿಶೇಷ ಕಡಿತ ನೀಡ ಲಾಗುವುದು ಎಂದರು.
ಈ ಸಂದರ್ಭದಲ್ಲಿ ಮ್ಯಾನೇಜ್ಮೆಂಟ್ ಸದಸ್ಯರು, ಗ್ರಾಹಕರು, ಸಿಬ್ಬಂದಿ ಉಪಸ್ಥಿತರಿದ್ದರು. ವಿಜ್ಞೇಶ್ ಕಾರ್ಯಕ್ರಮ ನಿರೂಪಿಸಿ, ರಾಘವೇಂದ್ರ ನಾಯಕ್ ವಂದಿಸಿದರು.







