ಮಗು ಮಾರಾಟ ಪ್ರಕರಣ: ಆರೋಪಿ ಪೊಲೀಸ್ ಕಸ್ಟಡಿಗೆ
ಮಂಗಳೂರು, ಮಾ.6: ಮಗು ಮಾರಾಟ ಪ್ರಕರಣದ ಆರೋಪಿ ರೆಯಾನ್ ಎಂಬವರನ್ನು ಪೊಲೀಸರು ನ್ಯಾಯಾಲಯಕ್ಕೆ ಶನಿವಾರ ಹಾಜರು ಪಡಿಸಿದ್ದಾರೆ. ಪೊಲೀಸರ ಮನವಿಯಂತೆ ನ್ಯಾಯಾಲಯವು ಆರೋಪಿಯನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿದೆ.
ಬೇರೆ ಪ್ರಕರಣಗಳಿಗೆ ಶೋಧ: ರೆಯಾನ್ ತನ್ನ ಕೃತ್ಯಗಳ ಬಗ್ಗೆ ಪೊಲೀಸರಿಗೆ ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಈತ ಇದೇ ರೀತಿ ಬೇರೆ ಮಗುವನ್ನು ಮಾರಾಟ ಮಾಡಿರಬಹುದೇ ಎಂಬ ಪೊಲೀಸರ ಸಂದೇಹಕ್ಕೆ ಉತ್ತರ ಸಿಕ್ಕಿಲ್ಲ. ಪೊಲೀಸರು ತಮ್ಮ ಸಂಪರ್ಕದ ಮೂಲಕ ಪ್ರಕರಣದ ಬಗ್ಗೆ ಇನ್ನಷ್ಟು ಆಳವಾಗಿ ವಿಚಾರಣೆ ನಡೆಸುತ್ತಿದ್ದು ಒಂದು ವೇಳೆ ಇದೇ ರೀತಿ ಬೇರೆ ಮಕ್ಕಳು ಕೂಡ ಮಾರಾಟವಾಗಿದ್ದರೆ ಅವುಗಳನ್ನು ರಕ್ಷಿಸುವು ದಕ್ಕಾಗಿ ಆದ್ಯತೆ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
Next Story