ಬ್ರಹ್ಮಾವರದಲ್ಲಿ ಜನ ಔಷಧಿ ದಿನಾಚರಣೆ: ಸಚಿವ ಸದಾನಂದ ಗೌಡ ಉದ್ಘಾಟನೆ, ಪ್ರಧಾನಿ ಜೊತೆ ನೇರಪ್ರಸಾರದಲ್ಲಿ ಸಂವಾದ

ಬ್ರಹ್ಮಾವರ, ಮಾ.7: ಮೂರನೇ ವರ್ಷದ ಜನೌಷಧಿ ದಿನಾಚರಣೆ ಕಾರ್ಯಕ್ರಮವನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸಚಿವ ಡಿ.ವಿ.ಸದಾನಂದ ಗೌಡ ಇಂದು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡದ, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರದಲ್ಲಿ ಉದ್ಘಾಟಿಸಿದರು.
ಬಳಿಕ ವೀಡಿಯೋ ಕಾನ್ಫರೆನ್ಸ್ ಮೂಲಕ ನೇರ ಪ್ರಸಾರಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸಚಿವರು ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಇದೇ ವೇಳೆ ಪ್ರಧಾನಿ, 7500ನೆ ಜನ ಔಷಧಿ ಕೇಂದ್ರವನ್ನು ಉದ್ಘಾಟಿಸಿದರು. ನಂತರ ಜನ ಔಷಧಿಗೆ ಸಂಬಂಧಿಸಿ ಬ್ರಹ್ಮಾವರದಿಂದ ಮಂಗಳೂರಿನ ವೈದ್ಯ ಡಾ.ಪದ್ಮನಾಭ ಕಾಮತ್, ಗುಜರಾತ್‌ನ ಅಹಮದಾಬಾದ್ ದಿಂದ ರಾಜು ಬಯಾನಿ, ಮಧ್ಯಪ್ರದೇಶದ ಭೋಪಾಲ್ ನಿಂದ ರುಬಿನಾ, ಡಿಯುನ ಮಾರುತಿನಗರ ದಿಂದ ಇರ್ಷಾದ್ ಅಹ್ಮದ್, ಮೇಘಾಲಯದ ಶಿಲ್ಲಾಂಗ್ ದಿಂದ ಕೃಷ್ಣ ವರ್ಮ ಜೊತೆ ಸಂವಾದ ನಡೆಸಿದರು.
ವಿಡಿಯೋ ಕಾನ್ಫರೆನ್ಸ್ ಮಾತುಕತೆಗೆ ಜನಪ್ರತಿನಿಧಿಗಳು ಸಾಕ್ಷಿಯಾಗಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮೊದಲಾದವರು ಹಾಜರಿದ್ದರು.






.jpeg)



