ಪಾಕಿಸ್ತಾನದಲ್ಲಿ ಹಿಂದೂ ಕುಟುಂಬವೊಂದರ ಐವರು ಸದಸ್ಯರು ಕೊಲೆಗೈದ ಸ್ಥಿತಿಯಲ್ಲಿ ಪತ್ತೆ
ಭೀತಿಯಲ್ಲಿ ಸ್ಥಳೀಯರು

ಮುಲ್ತಾನ್: ಅತ್ಯಂತ ನಿಗೂಢವಾಗಿ ಪಾಕಿಸ್ತಾನದಲ್ಲಿರುವ ಹಿಂದೂ ಕುಟುಂಬವೊಂದರ ಐವರು ಸದಸ್ಯರು ಭೀಕರವಾಗಿ ಕೊಲೆಗೈಯಲ್ಪಟ್ಟಿರುವ ಘಟನೆ ವರದಿಯಾಗಿದ್ದು, ಈ ಘಟನೆಯು ಪಾಕಿಸ್ತಾನದಲ್ಲಿರುವ ಹಿಂದೂ ಸಮುದಾಯಕ್ಕೆ ಮತ್ತು ಸ್ಥಳೀಯ ನಿವಾಸಿಗಳಿಗೆ ಆಘಾತ ತಂದಿದೆ ಎಂದು indiatoday.in ವರದಿ ಮಾಡಿದೆ.
ರಹೀಮ್ ಯಾರ್ ಖಾನ್ ಸಿಟಿಯಿಂದ 15 ಕಿ.ಮೀ. ದೂರದಲ್ಲಿರುವ ಅಬುಧಾಬಿ ಕಾಲನಿಯ ಮನೆಯೊಂದರಲ್ಲಿ ವಾಸವಾಗಿದ್ದ ಕುಟುಂಬವೊಂದರ ಐವರು ಸದಸ್ಯರು ಹರಿತವಾದ ಆಯುಧ ಬಳಸಿ ಗಂಟಲು ಸೀಳಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು The News Internationl ವರದಿ ಮಾಡಿದೆ.
ಪೊಲೀಸರು ಹತ್ಯೆಗೆ ಬಳಸಲಾಗಿರುವ ಚಾಕು ಹಾಗೂ ಕೊಡಲಿಯನ್ನು ವಶಕ್ಕೆ ಪಡೆದಿದ್ದಾರೆ. ಕೊಲೆಗೈಯಲ್ಪಟ್ಟ ರಾಮಚಂದ್ 35-36 ವಯಸ್ಸಿನವರಾಗಿದ್ದು, ದೀರ್ಘ ಸಮಯದಿಂದ ಟೈಲರಿಂಗ್ ಅಂಗಡಿ ನಡೆಸುತ್ತಿದ್ದಾರೆ. ಇವರು ಶಾಂತ ಸ್ವಭಾವದ ವ್ಯಕ್ತಿತ್ವದವನಾಗಿದ್ದು, ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಈ ಘಟನೆಯು ಪ್ರತಿಯೊಬ್ಬರಿಗೂ ಆಘಾತವುಂಟು ಮಾಡಿದೆ ಎಂದು The News Internationl ಗೆ ಸಾಮಾಜಿಕ ಹೋರಾಟಗಾರ ಬಿರ್ಬಲ್ ದಾಸ್ ತಿಳಿಸಿದ್ದಾರೆ.