ಮಲ್ಪೆ ಕಡಲಿನಲ್ಲಿ 40 ವಿದ್ಯಾರ್ಥಿನಿಯರಿಂದ ಕಯಾಕಿಂಗ್ ಸಾಹಸ ಯಾತ್ರೆ
ಬೀಚ್‌ನಿಂದ ಸೈಂಟ್‌ಮೇರಿಸ್‌ಗೆ ಪಯಣ, ವಿಶಿಷ್ಟ ಮಹಿಳಾ ದಿನಾಚರಣೆ

ಉಡುಪಿ, ಮಾ.8: ಮಲ್ಪೆ ಬೀಚ್‌ನಿಂದ ಸೈಂಟ್ ಮೇರಿಸ್ ದ್ವೀಪದವರೆಗೆ ಸುಮಾರು 40 ವಿದ್ಯಾರ್ಥಿನಿಯರು ಕಯಾಕಿಂಗ್ ಸಾಹಸ ಯಾತ್ರೆ ಮಾಡುವ ಮೂಲಕ ಇಂದು ಉಡುಪಿ ಜಿಲ್ಲಾಡಳಿತದಿಂದ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಜಿಲ್ಲಾಡಳಿತ, ಜಿಪಂ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅಜ್ಜರಕಾಡು ಡಾ.ಜಿ.ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾದ ಈ ಸಾಹಸ ಯಾತ್ರೆಗೆ ಉಡುಪಿ ನಗರಸಭೆ ಅಧ್ಯಕ್ಷೆ ಸುವಿುತ್ರಾ ಆರ್.ನಾಯಕ್ ಚಾಲನೆ ನೀಡಿದರು.
ಅಜ್ಜರಕಾಡು ಡಾ.ಜಿ.ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ 10, ಉಡುಪಿ ಎಂಜಿಎಂ ಕಾಲೇಜು 5 ಹಾಗೂ ಅಜ್ಜರಕಾಡು ಕ್ರೀಡಾ ವಸತಿ ನಿಲಯದ 5 ವಿದ್ಯಾರ್ಥಿನಿಯರು ಸೇರಿದಂತೆ ತರಬೇತಿ ಪಡೆದ ಒಟ್ಟು 20 ಮಂದಿ ಮೊದಲ ತಂಡದಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳೊಂದಿಗೆ 4ಕಿ.ಮೀ. ದೂರದ ಸೆಂಟ್ ಮೇರಿಸ್‌ಗೆ ಯಾತ್ರೆ ಹೊರಟರು.
ಅದರ ಹಿಂದೆ ಎರಡು ಮೂರು ತಂಡಗಳಾಗಿ ಒಟ್ಟು 40 ವಿದ್ಯಾರ್ಥಿನಿಯರು ತಮ್ಮ ಸಾಹಸ ಪ್ರಯಾಣವನ್ನು ಆರಂಭಿಸಿದರು. ಹೀಗೆ ಪ್ರತಿ ತಂಡ ಒಂದು ಗಂಟೆ 15 ನಿಮಿಷಗಳ ಅವಧಿಯಲ್ಲಿ ಸೈಂಟ್ ಮೇರಿಸ್ ದ್ವೀಪವನ್ನು ತಲುಪಿತು. ಅದೇ ರೀತಿ ತಂಡಗಳು ವಾಪಾಸ್ಸು ಬೀಚ್‌ಗೆ ಆಗಮಿಸುವ ಮೂಲಕ ತಮ್ಮ ಸಾಹಸ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿತು.
ಸಮಾರಂಭದಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಕಯಾಕಿಂಗ್ ಎಂಬ ಹೆಸರನ್ನೇ ಮೊದಲ ಬಾರಿಗೆ ಕೇಳಿದ ನಮಗೆ, ತರಬೇತಿ ಸಂದರ್ಭದಲ್ಲಿ ತುಂಬಿದ ಧೈರ್ಯದಿಂದ ಈ ಸಾಹಸ ಮಾಡಲು ಸಾಧ್ಯವಾಗಿದೆ. ಹಿಂದೆ ನೀರು ಅಂದರೆ ನಮಗೆ ತುಂಬಾ ಭಯ ಆಗುತ್ತಿತ್ತು. ಈಗ ಅಲ್ಲಿಂದ ಹೊರಗಡೆ ಬರಲು ಮನಸ್ಸು ಬರುತ್ತಿಲ್ಲ. ಇದು ನಮಗೆಲ್ಲ ಹೊಸ ಅನುಭವ ನೀಡಿದೆ.
-ರಕ್ಷಿತಾ, ವಿದ್ಯಾರ್ಥಿನಿ
ಈ ಸಾಹಸ ಯಾತ್ರೆ ಮಾಡುವಾಗ ಸಮುದ್ರದ ಅಲೆಗಳು ಮತ್ತು ಗಾಳಿಗೆ ಹೊಂದಿಕೊಂಡು ಹೋಗಬೇಕಾಗುತ್ತದೆ. ಮೊದಲ ಬಾರಿ ಈ ಸಾಹಸ ಮಾಡುತ್ತಿ ರುವ ವಿದ್ಯಾರ್ಥಿಗಳಿಗೆ ಕಷ್ಟವಾದರೂ ಅವರಲ್ಲಿರುವ ಉತ್ಸಾಹ, ಸ್ಪೂರ್ತಿ ಅದನ್ನು ಸುಲಭವನ್ನಾಗಿಸುತ್ತದೆ. ಇವರಿಗೆ ಉ್ತಮ ರೀತಿಯ ತರಬೇತಿ ನೀಡಿದ್ದೇವೆ.
-ದಿನೇಶ್, ಮುಖ್ಯ ತರಬೇತುದಾರರು, ರಾಷ್ಟ್ರೀಯ ಸಾಹಸ ಅಕಾಡೆಮಿ








