ಉಡುಪಿ ಸುಲ್ತಾನ್ ಗೋಲ್ಡ್ನಿಂದ ‘ಸುಲ್ತಾನ್ ನಾರಿ ಶಕ್ತಿ' ಪ್ರಶಸ್ತಿ ಪ್ರದಾನ
ಉಡುಪಿ, ಮಾ.8: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ 'ಸುಲ್ತಾನ್ ನಾರಿ ಶಕ್ತಿ' ಪ್ರಶಸ್ತಿ ಪ್ರದಾನ ಸಮಾರಂಭವು ಉಡುಪಿ ಶಾಖೆಯಲ್ಲಿ ಇಂದು ನಡೆಯಿತು.
ರಂಗಭೂಮಿ ಕಲಾವಿದೆ ಶಿಲ್ಪಾ ಜೋಶಿ, ಕವಯತ್ರಿ ಪೂರ್ಣಿಮಾ ಸುರೇಶ್ ಹಾಗೂ ಮಹಿಳಾ ಉದ್ಯಮಿ ಸರಿತಾ ಸಂತೋಷ್ ಅವರಿಗೆ ಸುಲ್ತಾನ್ ನಾರಿ ಶಕ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಂಡಾರ್ಕರ್ ಎಂಟರ್ಪ್ರೈಸಸ್ನ ಸ್ವರ್ಣ ಭಂಡಾರ್ಕರ್, ಉಡುಪಿ ಮಹಿಳಾ ಪೊಲೀಸ್ ಠಾಣೆಯ ಮಹಿಳಾ ಎಸ್ಸೈ ವೈಲೆಟ್ ಫೆಮಿನಾ, ಪ್ರೊ.ಶಂಕರ್ ಮಾತನಾಡಿದರು.
ಸುಲ್ತಾನ್ ಗೋಲ್ಡ್ನ ಉಡುಪಿ ಬ್ರಾಂಚ್ ಮೆನೇಜರ್ ಮುಹಮ್ಮದ್ ಅಜ್ಮಲ್ ಸ್ವಾಗತಿಸಿದರು. ಫ್ಲೋರ್ ಮೆನೇಜರ್ ಸಿದ್ಧೀಕ್ ಹಸನ್ ಕಾರ್ಯಕ್ರಮ ನಿರೂಪಿಸಿದರು. ಅಸಿಸ್ಟೆಂಟ್ ಸೇಲ್ಸ್ ಮೆನೇಜರ್ ಶಮಿಲ್ ಅಬ್ದುಲ್ ಖಾದರ್ ಪ್ರಶಸ್ತಿ ವಿಜೇತರ ಪರಿಚಯ ಮಾಡಿದರು. ಪಿಆರ್ಓ ಮಂಜುನಾಥ್ ಅಮೀನ್ ವಂದಿಸಿದರು. ಅಸಿಸ್ಟೆಂಟ್ ಸೇಲ್ಸ್ ಮೆನೇಜರ್ ನಝೀರ್ ಅಡ್ಡೂರ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.