ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮೊದಲು ಟೀಮ್ ಇಂಡಿಯಾಕ್ಕೆ ಕ್ವಾರಂಟೈನ್
ಮುಂಬೈ:ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಪಾಲ್ಗೊಳ್ಳುವ ಮೊದಲು ಟೀಮ್ ಇಂಡಿಯಾದ ಸದಸ್ಯರು 14 ದಿನಗಳ ಕಾಲ ಕಠಿಣ ಕ್ವಾರಂಟೈನ್‌ನಲ್ಲಿರುತ್ತಾರೆ.
ಮೇ 30ರಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್ ನಂತರ ಭಾರತದ ಆಟಗಾರರು ಜೂನ್ ಮೊದಲ ವಾರದಲ್ಲಿ ಇಂಗ್ಲೆಂಡ್‌ಗೆ ತೆರಳಲಿದ್ದಾರೆ. 14 ಆಸ್ಟ್ರೇಲಿಯದಲ್ಲಿ ಇದ್ದಂತೆ 14 ದಿನಗಳ ಕಾಲ ಸಂಪರ್ಕತಡೆಯಲ್ಲಿರುತ್ತಾರೆ.
ಸೌತಾಂಪ್ಟನ್‌ನ್ನಲ್ಲಿರುವ ಏಗಾಸ್ ಬೌಲ್ ಕ್ರೀಡಾಂಗಣದ ಆವರಣ ದೊಳಗಿನ ಹಿಲ್ಟನ್ ಹೊಟೇಲ್ ಫೈನಲ್‌ನಲ್ಲಿ ಆಡಲಿರುವ ಆಟಗಾರರಿಗೆ ಆದ್ಯತೆಯ ಸ್ಥಳವಾಗಿದೆ. ಫೈನಲ್ ಪಂದ್ಯದ ಆತಿಥ್ಯ ವಹಿಸಿಕೊಂಡಿರುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಜೂನ್ 1-26ರ ನಡುವೆ ಇಡೀ ಹೊಟೇಲ್‌ನ್ನು ಸುಪರ್ದಿಗೆ ತೆಗೆದುಕೊಳ್ಳಲಿದೆ.
ಫೈನಲ್ ಪಂದ್ಯದ ಆಟದ ಪರಿಸ್ಥಿತಿಗಳು ಇನ್ನೂ ಬಿಡುಗಡೆಯಾಗಿಲ್ಲವಾದರೂ ಟೆಸ್ಟ್ ಪಂದ್ಯಕ್ಕೆ ಮೀಸಲು ದಿನವನ್ನು ಇಡಲು ಐಸಿಸಿ ನಿರ್ಧರಿಸಿದೆ. ಇಂಗ್ಲೆಂಡ್‌ನ ಸೂಕ್ಷ್ಮ ಹವಾಮಾನವನ್ನು ಪರಿಗಣಿಸಿ ಟೆಸ್ಟ್‌ಗೆ ಹೆಚ್ಚುವರಿ ದಿನವು ಜಾರಿಯಲಿರುತ್ತದೆ. ಏಗಾಸ್ ಬೌಲ್ 25,000 ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ಭಾರತದ ತಂಡವು 14 ದಿನಗಳ ಸಂಪರ್ಕತಡೆಯನ್ನು ತಾತ್ವಿಕವಾಗಿ ಒಪ್ಪಿಕೊಂಡಿದೆ. ಕ್ವಾರೆಂಟೈನ್‌ನಲ್ಲಿರು ವಾಗ ಅಭ್ಯಾಸ ನಡೆಸಲು ಅನುಮತಿ ನೀಡಲಾಗುತ್ತದೆ. ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಜೂನ್ 18ರಿಂದ 22ರ ತನಕ ನಡೆಯಲಿದೆ.







