ಮಂಗಳೂರು: ಕಾಂಚನ ಅಟೋಮೊಬೈಲ್ಸ್ ನಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ

ಮಂಗಳೂರು, ಮಾ.9: ನಗರದ ಪ್ರತಿಷ್ಠಿತ ಹುಂಡೈ ಕಾರಿನ ಅಧಿಕೃತ ಡೀಲರ್ ಕಾಂಚನ ಅಟೋಮೊಬೈಲ್ಸ್ ನಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸೋಮವಾರ ವಿನೂತನವಾಗಿ ಆಚರಿಸಲಾಯಿತು.
ಕಾಂಚನಾ ಅಟೋಮೊಬೈಲ್ಸ್ ನಿರ್ದೇಶಕಿ ಸುಕನ್ಯಾ ಪಿ. ಕಾಂಚನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಿಳಾ ಸಬಲೀಕರಣದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಚನಾ ಹುಂಡೈ ಸೇಲ್ಸ್ ಮ್ಯಾನೆಜರ್ ಗಣಪತಿ, ಸರ್ವೀಸ್ ಮ್ಯಾನೇಜರ್ ಜಯ ಕಿಶಾನ್, ಅಕೌಂಟ್ಸ್ ಮ್ಯಾನೇಜರ್ ಸುದರ್ಶನ್, ವಿಲ್ಫ್ರೆಡ್ ಮೊದಲಾದವರು ಉಪಸ್ಥಿತರಿದ್ದರು.
ಕಾಂಚನ ಹುಂಡೈನ ಹಲವಾರು ಮಹಿಳಾ ಗ್ರಾಹಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಅತಿಥಿ ಗ್ರಾಹಕರಿಗೆ ಸಿಹಿತಿಂಡಿ ಮತ್ತು ಸಸಿಗಳನ್ನು ವಿತರಿಸಲಾಯಿತು.
ಚೈತ್ರಾ ಎಸ್. ಸ್ವಾಗತಿಸಿದರು. ವಿಜೇತಾ ಸಿ. ಕಾರ್ಯಕ್ರಮ ನಿರೂಪಿಸಿದರು. ವಾಯ್ಲಿನ್ ಡಿ ಕೋಸ್ತ ವಂದಿಸಿದರು.

Next Story







