ಬಲಪಂಥೀಯ ಹಿಂದುತ್ವ ಸಂಘಟನೆಗಳಿಂದ ನಡೆಯುವ ಹಿಂಸೆಯನ್ನು ಖಂಡಿಸಿದ ಆಸ್ಟ್ರೇಲಿಯಾ ಸೆನೆಟರ್

photo: theguardian
ಹೊಸದಿಲ್ಲಿ: ಬಲಪಂಥೀಯ ಹಿಂದು ಸಂಘಟನೆಗಳು ಒಡ್ಡುವ ಅಪಾಯದ ಕುರಿತು ಈ ಹಿಂದೆ ಮಾತನಾಡಿದ್ದ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಸ್ಟೇಟ್ ಸೆನೆಟರ್ ಡೇವಿಡ್ ಶೂಬ್ರಿಡ್ಜ್ ಇದೇ ವಿಚಾರವನ್ನು ನ್ಯೂ ಸೌತ್ ವೇಲ್ಸ್ ವಿಧಾನಸಭೆಯಲ್ಲಿ ಎತ್ತಿದ್ದಾರೆ ಎಂದು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.
"ಸಿಐಎಯಿಂದ ತೀವ್ರಗಾಮಿ ಧಾರ್ಮಿಕ ಸಂಘಟನೆ ಎಂದು ಪರಿಗಣಿತವಾದ ಬಲಪಂಥೀಯ ಹಿಂದು ಸಂಘಟನೆ ವಿಶ್ವ ಹಿಂದು ಪರಿಷತ್ ಹೇಗೆ ನ್ಯೂ ಸೌತ್ ವೇಲ್ಸ್ ನ ಪಬ್ಲಿಕ್ ಶಾಲೆಗಳಲ್ಲಿ ಕಾಣಿಸಿಕೊಂಡಿದೆ?" ಎಂದು ಡೇವಿಡ್ ಪ್ರಶ್ನಿಸಿದ್ದಾರೆಂದು ವರದಿ ತಿಳಿಸಿದೆ.
"ಈ ನವ-ನಾಝಿ ಗುಂಪುಗಳು ಸರಕಾರದ ನಿಗಾದಲ್ಲಿವೆಯೇ? ಹಾಗಿದ್ದಲ್ಲಿ ಅವುಗಳ ಕುರಿತು ಏನು ಮಾಡಲಾಗುತ್ತಿದೆ?" ಎಂದು ಸೆನೆಟರ್ ಹಾಗೂ ಕ್ರೀಡೆ, ಬಹು-ಸಂಸ್ಕೃತಿ, ಹಿರಿಯರ ಖಾತೆಯನ್ನು ಹೊಂದಿರುವ ಹಂಗಾಮಿ ಸಚಿವ ಜೆಫ್ ಲೀ ಜತೆಗೆ ಮಾರ್ಚ್ 5ರಂದು ನಡೆದ ಚರ್ಚೆ ವೇಳೆ ಡೇವಿಡ್ ಪ್ರಶ್ನಿಸಿದ್ದಾರೆ.
"ಹ್ಯಾರಿಸ್ ಪಾರ್ಕ್ ನಲ್ಲಿ ನಡೆದ ದಾಳಿ ಹಾಗೂ ತೀರಾ ಇತ್ತೀಚೆಗೆ ರವಿವಾರ ರಾತ್ರಿ ನಾಲ್ಕು ಸಿಖ್ ಯುವಕರು ಸಂಭ್ರಮಾಚರಣೆಯಲ್ಲಿದ್ದ ವೇಳೆ ನಡೆದ ದಾಳಿಯ ಬಗ್ಗೆ ಕೇಳಿದ್ದೇನೆ. ಅವರು ಹೊಸ ಕಾರು ಹೊಂದಿದ್ದರು ಹಾಗೂ ಅವರನ್ನು ತಡೆದು ಕಾರನ್ನು ಪುಡಿಗಟ್ಟಲಾಯಿತು. ಅವರು ಸಿಖ್ ಸಮುದಾಯದವರು ಎಂಬ ಕಾರಣಕ್ಕೆ ದಾಳಿ ನಡೆದಿದೆ ಎಂದು ನನಗೆ ತಿಳಿದು ಬಂತು ಹಾಗೂ ದಾಳಿ ತೀವ್ರ ಬಲಪಂಥೀಯ ಸಂಘಟನೆಯಿಂದ ನಡೆದಿದೆ, ಬಲಪಂಥೀಯ ಹಿಂದುತ್ವ ರಾಷ್ಟ್ರೀಯವಾದಿ ಸಂಘಟನೆ ಹೊರತು ಪಡಿಸಿ ಬೇರೆ ಯಾವುದೇ ಭಾರತೀಯ ಸಮುದಾಯಗಳಿಂದ ಇಂತಹ ದಾಳಿಯ ಕುರಿತ ವರದಿ ಓದಿಲ್ಲ,'' ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 28ರಂದು ಸಿಖ್ ಯುವಕರ ಮೇಲಿನ ದಾಳಿಯನ್ನು ಉಲ್ಲೇಖಿಸಿ ಡೇವಿಡ್ ಮೇಲಿನ ಮಾತುಗಳನ್ನಾಡಿದ್ದಾರೆ.
ಬಲಪಂಥೀಯ ಹಿಂದು ಉಗ್ರವಾದ ಒಡ್ಡುವ ಅಪಾಯದ ಕುರಿತು ಆಸ್ಟ್ರೇಲಿಯನ್ ಅಲಾಯನ್ಸ್ ಅಗೇನ್ಸ್ಟ್ ಹೇಟ್ ಎಂಡ್ ವಾಯ್ಲೆನ್ಸ್ ಸಂಘಟನೆ ಸಿಡ್ನಿಯ ಭಾರತೀಯ ಕಾನ್ಸುಲೇಟ್ ಎದುರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಡೇವಿಡ್ ಮಾತನಾಡಿದ ಕೆಲವೇ ಗಂಟೆಗಳಲ್ಲಿ ದಾಳಿ ನಡೆದಿತ್ತು.
@ShoebridgeMLC of @nsw_upperhouse grills New South Wales's Acting Minister for Multiculturalism @GeoffLeeMP about recent attack on local Sikhs (allegedly by Hindutva elements), spread of Hindu nationalist sentiment, & religious education by VHP-Australia in public schools. pic.twitter.com/DVrmqi6Bp2
— Pieter Friedrich (@FriedrichPieter) March 5, 2021







