ಬೆಳ್ತಂಗಡಿ: ಮರ ಮೈಮೇಲೆ ಬಿದ್ದು ಮೂವರು ಮೃತ್ಯು

ಬೆಳ್ತಂಗಡಿ, ಮಾ.9: ಮರ ಕಡಿಯುತ್ತಿದ್ದ ಸಂದರ್ಭದಲ್ಲಿ ಬಿದ್ದ ಮರದಡಿಗೆ ಸಿಲುಕಿ ಮೂವರು ದಾರುಣವಾಗಿ ಮೃತಪಟ್ಟ ಘಟನೆ ಪಟ್ರಮೆ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಪಟ್ರಮೆ ಗ್ರಾಮದ ಕಾಯಿಲ ಎಂಬಲ್ಲಿ ಧೂಪದ ಮರವನ್ನು ಕಡಿದು ಉರುಳಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಉಳಿಯ ಮನೆ ನಿವಾಸಿ ರಾಮಣ್ಣ ಕುಂಬಾರ ಎಂಬವರ ಪುತ್ರ ಪ್ರಶಾಂತ್(23), ಸೇಸಪ್ಪ ಪೂಜಾರಿ ಎಂಬವರ ಪುತ್ರ ಸ್ವಸ್ತಿಕ್ (25) ಮತ್ತು ಇನ್ನೋರ್ವ ಉಪ್ಪಿನಂಗಡಿಯ ಗಣೇಶ್ (38) ಮೃತಪಟ್ಟವರಾಗಿದ್ದಾರೆ.
ಅನಾರು ಕಾಯಿಲ ಲೋಕಯ್ಯ ಗೌಡ ಎಂಬರಿಗೆ ಸೇರಿದ ಸ್ಥಳದಲ್ಲಿ ಮರ ಕಡಿಯುತ್ತಿದ್ದ ಸಂದರ್ಭ ಈ ಅವಘಡ ನಡೆದಿದೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ., ಧರ್ಮಸ್ಥಳ ಠಾಣಾ ಎಸ್ಸೈ ಪವನ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Next Story





