ಸೀಟು ಹಂಚಿಕೆ ವಿಚಾರದಲ್ಲಿ ನಿರಾಸೆ: ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟ ತ್ಯಜಿಸಿದ ವಿಜಯಕಾಂತ್ ಪಕ್ಷ

ಚೆನ್ನೈ/ಹೊಸದಿಲ್ಲಿ: ಮುಂದಿನ ತಿಂಗಳು ನಡೆಯಲಿರುವ ತಮಿಳುನಾಡು ರಾಜ್ಯ ವಿಧಾನಸಭೆ ಚುನಾವಣೆಗೆ ಮೊದಲು ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಹಿನ್ನಡೆಯಾಗಿದ್ದು, ವಿಜಯಕಾಂತ್ ನೇತೃತ್ವದ ಡಿಎಂಡಿಕೆ ಪಕ್ಷವು ಸೀಟು ಹಂಚಿಕೆ ವಿಚಾರದಲ್ಲಿ ಅಸಮಾಧಾನಗೊಂಡು ಮೈತ್ರಿಕೂಟದಿಂದ ಹೊರ ನಡೆದಿದೆ.
ಮೂರು ಸುತ್ತುಗಳ ಚರ್ಚೆಯ ಬಳಿಕ ಎಐಎಡಿಎಂಕೆ ನಾವು ನಿರೀಕ್ಷಿಸಿದ್ದಷ್ಟು ಸೀಟುಗಳನ್ನು ನೀಡಿಲ್ಲ ಎಂದು ಡಿಎಂಡಿಕೆ ಪಕ್ಷ ತಿಳಿಸಿದೆ.
ತಮಿಳುನಾಡಿನಲ್ಲಿ ಎಪ್ರಿಲ್ 6ರಂದು ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆಯು ನಡೆಯಲಿದೆ.ಮೇ 2ರಂದು ಫಲಿತಾಂಶಪ್ರಕಟವಾಗಲಿದೆ.
ಎಐಎಡಿಎಂಕೆ 234 ಸದಸ್ಯಬಲದ ವಿಧಾನಸಭೆಯಲ್ಲಿ 20 ಸೀಟುಗಳನ್ನು ಮಿತ್ರಪಕ್ಷ ಬಿಜೆಪಿಗೆ ಹಾಗೂ ಇನ್ನೊಂದು ಮೈತ್ರಿಪಕ್ಷ ಪಿಎಂಕೆಗೆ 23 ಸೀಟುಗಳನ್ನು ನೀಡಿತ್ತು.
Next Story





