ಹೂಡೆ ಸಾಲಿಹಾತ್ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ

ಉಡುಪಿ, ಮಾ.9: ತೋನ್ಸೆ ಹೂಡೆಯ ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಜಮಾಅತೇ ಇಸ್ಲಾಮೀ ಹಿಂದ್ ಹೂಡೆ ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಇತ್ತೀಚೆಗೆ ಸಾಲಿಹಾತ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಉಡುಪಿಯ ಆಶಾ ನಿಲಯದ ಮುಖ್ಯಸ್ಥೆ ಶಶಿಕಲಾ ಕೊಟ್ಯಾನ್ ಮಾತನಾಡಿ, ಮಹಿಳೆಯು ತನ್ನ ಸ್ವಸಾಮರ್ಥ್ಯ, ಶ್ರಮ ಹಾಗೂ ವೃತ್ತಿಪರತೆಯನ್ನು ಗೌರವಿಸುವುದರ ಮೂಲಕ ಪ್ರಸ್ತುತ ಸಮಯದಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತೋನ್ಸೆ ಗ್ರಾಪಂನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲತಾ ಇವರನ್ನು ಸನ್ಮಾನಿಸಲಾಯಿತು. ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಶಬೀನ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸುನಂದಾ, ವಿದ್ಯಾರ್ಥಿ ನಾಯಕಿ ಸಬೀಲಾ ಕೌಸರ್, ಉಪ ನಾಯಕಿ ಸಭಾ ಮೊದಲಾದವರು ಉಪಸ್ಥಿತರಿದ್ದರು. ಮುಝ್‌ನಾ ಪ್ರಾರ್ಥಿಸಿ ದರು. ಆಲಿಯಾ ಸ್ವಾಗತಿಸಿದರು. ನೌರಾ ವಂದಿಸಿದರು. ಮುನಾ ಮನ್ನ ಕಾರ್ಯಕ್ರಮ ನಿರೂಪಿಸಿದರು.





