ಮಾ.13: ನಮ್ಮ ಕುಡ್ಲ ಟಾಕೀಸ್‌ನಲ್ಲಿ ಚಾಲಿಪೋಲಿಲು ಸಿನಿಮಾ ಪ್ರದರ್ಶನ
ಮಂಗಳೂರು, ಮಾ.9 : ತುಳು ಸಿನಿಮಾ ರಂಗದಲ್ಲಿ ಚಾರಿತ್ರಿಕ ದಾಖಲೆ ನಿರ್ಮಿಸಿದ ಜಯಕಿರಣ ಫಿಲಂಸ್ ಲಾಂಛನದಲ್ಲಿ ತಯಾರಾದ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದ ಚಾಲಿ ಪೋಲಿಲು ಚಲನ ಚಿತ್ರ ಮಾರ್ಚ್ 13ರಂದು ರಾತ್ರಿ 8 ಗಂಟೆಗೆ ನಮ್ಮ ಕುಡ್ಲ ಟಾಕೀಸ್‌ನಲ್ಲಿ ಪ್ರದರ್ಶನ ಕಾಣಲಿದೆ.
ನಮ್ಮ ಕುಡ್ಲ ಟಾಕೀಸ್‌ನಲ್ಲಿ ಮಾರ್ಚ್ ತಿಂಗಳ ಪ್ರತೀ ರವಿವಾರ ‘ಪೆಪ್ಪೆರೆರೆ ಪೆರೆರೆರೆ’ ತುಳು ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಪ್ರದರ್ಶನದ ವೀಕ್ಷಣೆಗೆ ಸ್ಥಳೀಯ ಕೇಬಲ್‌ನಿಂದ ಸಂಪರ್ಕ ಪಡೆದು ಕೊಂಡಿರುವ ವೀಕ್ಷಕರಿಗೆ ಚಾಲಿ ಪೋಲಿಲು ತುಳು ಚಲನಚಿತ್ರವನ್ನು ಉಚಿತವಾಗಿ ವೀಕ್ಷಿಸಬಹುದು.
ತುಳು ಸಿನಿಮಾರಂಗದಲ್ಲಿ 511 ದಿನ ಗಳ ಕಾಲ ಸತತ ಪ್ರದರ್ಶನ ಕಂಡಿರುವ ಚಾಲಿಪೋಲಿಲು ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸುಂದರ ರೈ ಮಂದಾರ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಚೇತನ್ ರೈ ಮಾಣಿ, ಅರ್ಜುನ್ ಕಾಪಿಕಾಡ್, ರಾಘವೇಂದ್ರ ರೈ, ಲಕ್ಷ್ಮ್ಮಣ ಕುಮಾರ್ ಮಲ್ಲೂರು, ಸರೋಜಿನಿ ಶೆಟ್ಟಿ, ಸುಮಿತ್ರ, ತಿಮ್ಮಪ್ಪ, ರೈ ಶೋಭಾ ರೈ, ಮಂಗೇಶ್ ಭಟ್, ಶಾಸಕ ಉಮಾನಾಥ ಎ. ಕೋಟ್ಯಾನ್, ಗಿರೀಶ್ ಎಂ. ಶೆಟ್ಟಿ ಕಟೀಲು, ಸದಾಶಿವ ದಾಸ್ ಪಾಂಡೇಶ್ವರ್, ದಿವ್ಯಾಶ್ರೀ, ವಿದ್ಯಾಶ್ರೀ, ಸುಜಾತ ಶಕ್ತಿನಗರ, ನವ್ಯಶ್ರೀ, ರಕ್ಷಿತಾ, ಪಾಂಡು, ಕರುಣಾಕರ ಸರಿಪಲ್ಲ ಪ್ರಶಾಂತ್, ಶಶಿ ಬೆಳ್ಳಾಯರು, ನರೇಶ್ ಸಸಿಹಿತ್ಲು, ಸುನೀಲ್, ಯಶವಂತ್ ಅಭಿನಯಿಸಿದ್ದಾರೆ.
ಸಿನಿಮಾಕ್ಕೆ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ದೇವದಾಸ್ ಕಾಪಿಕಾಡ್, ವೀರೇಂದ್ರ ಶೆಟ್ಟಿ, ಗೀತಾ ಸಾಹಿತ್ಯ ರಚಿಸಿದ್ದಾರೆ. ವಿ ಮನೋಹರ್ ಸಂಗೀತ ಒದಗಿಸಿದ್ದು, ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತ ಇದೆ. ಉತ್ಪಲ್ ವಿ. ನಾಯನಾರ್ ಛಾಯಾಗ್ರಾಹಕರಾಗಿದ್ದಾರೆ.







