ಪೈಪ್‌ಲೈನ್ ಕಾಮಗಾರಿ: ವಾಹನ ಸಂಚಾರ ನಿಷೇಧ
ಉಡುಪಿ, ಮಾ.9: ಉಡುಪಿ ನಗರಸಭಾ ವ್ಯಾಪ್ತಿಯ ಒಳಕಾಡು ವಾರ್ಡಿನ ಪದ್ಮಾವತಿ ಅಪಾರ್ಟ್‌ಮೆಂಟ್ ಎದುರಿನಿಂದ ಸರಸ್ವತಿ ಭವನದವರೆಗೆ ಆಳಗುಂಡಿಗಳ ಮರು ನಿರ್ಮಾಣ ಮತ್ತು ಪೈಪ್‌ಲೈನ್ ಬದಲಾವಣೆ ಕಾಮಗಾರಿ ನಡೆಯುವುದರಿಂದ ಈ ರಸ್ತೆಯಲ್ಲಿ ಮಾ. 8ರಿಂದ 22 ರವರೆಗೆ ವಾಹನ ಸಂಚಾರ ನಿಷೇಧಿಸಿ, ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಉಡುಪಿ ನಗರಸಭಾ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
Next Story





